ಬಿಸಿಲಿನಿಂದ ಕೂದಲಿನ ಸೌಂದರ್ಯ ಕಾಪಾಡಲು ಈ ಹಣ್ಣಿನ ಹೇರ್ ಪ್ಯಾಕ್ ಹಚ್ಚಿ

ವಾತಾವರಣದ ಬಿಸಿಲು ಮತ್ತು ಶುಷ್ಕ ಗಾಳಿಯಿಂದ ಕೂದಲಿನ ತೇವಾಂಶ ಕಡಿಮೆಯಾಗಿ ಡ್ರೈ ಆಗುತ್ತದೆ. ಹಾಗಾಗಿ ಆ ವೇಳೆ ಕೂದಲಿಗೆ ಹೆಚ್ಚಿನ ಆರೈಕೆ ಅಗತ್ಯವಿರುತ್ತದೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಕೂದಲು ಆರೋಗ್ಯಯುತವಾಗಿರಲು ಹಣ್ಣಿನ ಹೇರ್ ಪ್ಯಾಕ್ ಅನ್ನು ಬಳಸಿ.

1 ಕಪ್ ಸ್ಟ್ರಾಬೆರಿ ಪೇಸ್ಟ್ ಗೆ 1 ಮೊಟ್ಟೆಯ ಹಳದಿ ಲೋಳೆ ಮತ್ತು 5 ಹನಿ ರೋಸ್ಮರಿ ಎಸೆನ್ಷಿಯಲ್ ಆಯಿಲ್ ಅನ್ನು ಸೇರಿಸಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ಕೂದಲನ್ನು ಶಾಂಪು ಬಳಸಿ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಬಳಸಿ.

1 ಕಪ್ ಪಪ್ಪಾಯಿ ಪೇಸ್ಟ್ ಗೆ 1 ಚಮಚ ತೆಂಗಿನೆಣ್ಣೆ 1 ಚಮಚ ಜೇನುತುಪ್ಪ ಸೇರಿಸಿ ಮಿಕ್ಸ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ 1 ಗಂಟೆ ಬಿಟ್ಟು ಕೂದಲನ್ನು ವಾಶ್ ಮಾಡಿ. ಇದನ್ನು ವಾರಕ್ಕೆ 2 ಬಾರಿ ಬಳಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read