
ಕಳ್ಳತನವನ್ನು ತಡೆಗಟ್ಟುವ ವಿಶೇಷ ತಂತ್ರ ಈ ಸ್ಕೂಟರ್ನಲ್ಲಿದೆ. ಪಾರ್ಕಿಂಗ್ ಮಾಡುವಾಗ ಇದು ಅನುಕೂಲ ಆಗಲಿದೆ. ಇದು ವಾಹನಕ್ಕೆ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತದೆ. ಈ ವೈಶಿಷ್ಟ್ಯಗಳನ್ನು ಪ್ರವೇಶಿಸಲು ಸ್ಕೂಟರ್‌ನಲ್ಲಿ ಇರುವ ನಾಬ್-ಶೈಲಿಯ ಸ್ವಿಚ್ ಅನ್ನು ತಿರುಗಿಸುವ ಅಗತ್ಯವಿದೆ. ಸ್ಕೂಟರ್‌ನಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಸಿಂಗಲ್-ರಿಯರ್ ಸ್ಪ್ರಿಂಗ್ ಮತ್ತು ಎರಡೂ ಚಕ್ರಗಳಲ್ಲಿ ಡ್ರಮ್ ಬ್ರೇಕ್‌ಗಳು ಇವೆ.
ಕಾರುಗಳಲ್ಲಿ ಕಂಡು ಬರುವಂತೆ ಇದರಲ್ಲಿ ಕೂಡ ಸ್ಮಾರ್ಟ್ ಕೀ ವೈಶಿಷ್ಟ್ಯವಿದೆ. ಈ ಮೊದಲಿನ ವೇರಿಯಂಟ್‌ಗಳಲ್ಲಿ ನಾವೇ ಕೈಯಾರೇ ಕೀ ಬಳಸಿ ವಾಹನ ಸ್ಟಾರ್ಟ್ ಮಾಡುತ್ತಿದ್ದೆವು. ಆದರೆ ಇಲ್ಲಿ ಭೌತಿಕ ಕೀ ಸ್ಟಾರ್ಟ್ ಬದಲಿಗೆ ನಾಬ್ ಇಗ್ನಿಷನ್ ಅನ್ನು ಅಳವಡಿಸಲಾಗಿದೆ. ಇದರಿಂದ ಕೀ ಇಲ್ಲದೇ ಸ್ಕೂಟರ್ ಸ್ಟಾರ್ಟ್ ಆಗುತ್ತದೆ. ಸ್ಕೂಟರ್‌ನಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಸಿಂಗಲ್-ರಿಯರ್ ಸ್ಪ್ರಿಂಗ್ ಮತ್ತು ಎರಡೂ ಚಕ್ರಗಳಲ್ಲಿ ಡ್ರಮ್ ಬ್ರೇಕ್ ವ್ಯವಸ್ಥೆ ಇದೆ. ಒಂದು ವೇಳೆ ಸ್ಕೂಟರ್ ಕಳ್ಳತನವಾದರೆ ವಾಹನದ ಸ್ಥಳ ಪತ್ತೆಗೆ ಲೊಕೆಟಿಂಗ್ ತಂತ್ರಜ್ಞಾನ ವ್ಯವಸ್ಥೆ ಇದರಲ್ಲಿದೆ ಎಂದು ಕಂಪೆನಿ ಹೇಳಿದೆ. ಈ ತಿಂಗಳಾಂತ್ಯದಲ್ಲಿ ಇದು ಎಲ್ಲರ ಕೈ ಸೇರಲಿದೆ.

