HomeAstro'ಕಿರು ಬೆರಳು' ಹೇಳುತ್ತೆ ಭವಿಷ್ಯದ ಈ ವಿಷಯ

‘ಕಿರು ಬೆರಳು’ ಹೇಳುತ್ತೆ ಭವಿಷ್ಯದ ಈ ವಿಷಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನ ಕೈ ಆತನ ಸ್ವಭಾವದಿಂದ ಹಿಡಿದು ಸಾಕಷ್ಟು ವಿಷ್ಯಗಳನ್ನು ಬಿಚ್ಚಿಡುತ್ತದೆ. ವ್ಯಕ್ತಿ ಕೈನಲ್ಲಿ ಸಾಕಷ್ಟು ರೇಖೆಗಳಿರುತ್ತವೆ. ಅದ್ರಲ್ಲಿ ಮೂರು ರೇಖೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಜೀವನ ರೇಖೆ ವ್ಯಕ್ತಿಯ ಆಯಸ್ಸಿನ ಬಗ್ಗೆ ಹೇಳುತ್ತದೆ. ಹೃದಯ ರೇಖೆ ಪ್ರೇಮಕ್ಕೆ ಸಂಬಂಧಿಸಿದ ವಿಷ್ಯವನ್ನು ಹೇಳುತ್ತದೆ. ಮೆದುಳು ರೇಖೆ ಶಿಕ್ಷಣ ಹಾಗೂ ವೃತ್ತಿ ಬಗ್ಗೆ ತಿಳಿಸುತ್ತದೆ.

ಹಸ್ತದ ರೇಖೆಯೊಂದೇ ಅಲ್ಲ ಬೆರಳುಗಳು ಕೂಡ ಮನುಷ್ಯನ ಬುದ್ಧಿವಂತಿಕೆ, ಭವಿಷ್ಯದ ಬಗ್ಗೆ ಹೇಳುತ್ತದೆ. ದೇಹದ ಸಣ್ಣ ಭಾಗ ಕೈ ಜೀವನದ ದೊಡ್ಡ ದೊಡ್ಡ ಸತ್ಯವನ್ನು ಹೊರ ಹಾಕುತ್ತದೆ. ಕೈನ ಸಣ್ಣ ಬೆರಳು ಸಾಮಾನ್ಯಕ್ಕಿಂತ ಹೆಚ್ಚು ಉದ್ದವಿದ್ದರೆ ಆತನನ್ನು ಬುದ್ಧಿವಂತ ಎಂದು ಪರಿಗಣಿಸಲಾಗುತ್ತದೆ. ಇಂಥ ವ್ಯಕ್ತಿಗಳ ಬುದ್ಧಿ ಎರಡು ಪಟ್ಟು ಮುಂದಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾರ ಬೆರಳಿನ ಉದ್ದ ಸಾಮಾನ್ಯವಾಗಿರುತ್ತದೆಯೋ ಅವರು ಮನೆಯಲ್ಲಿ ಗೌರವಕ್ಕೆ ಪ್ರಾಪ್ತರಾಗ್ತಾರೆ. ಅರ್ಹತೆ ಆಧಾರದ ಮೇಲೆ ಮಾತ್ರ ಅವರು ಕೆಲಸ ಮಾಡ್ತಾರೆ.

ಯಾವ ವ್ಯಕ್ತಿಯ ಕೊನೆಯ ಬೆರಳಿನ ಉದ್ದ ಸಾಮಾನ್ಯಕ್ಕಿಂತ ಚಿಕ್ಕದಿರುತ್ತದೆಯೋ ಅಂಥವರು ಪ್ರತಿಭಾವಂತರಾಗಿರುತ್ತಾರೆ.

ಕೈನ ಅತ್ಯಂತ ಚಿಕ್ಕ ಬೆರಳು ತುಂಬಾ ಚಿಕ್ಕದಿದ್ದರೆ ಅವರು ಜೀವನ ನಡೆಸಲು ಅನರ್ಹರು ಎಂದು ಪರಿಗಣಿಸಲಾಗಿದೆ.

ಎಲ್ಲ ಬೆರಳುಗಳು ಸಾಮಾನ್ಯ ಉದ್ದಕ್ಕಿಂತ ಚಿಕ್ಕದಿದ್ದರೆ ಅಂಥವರು ಆತುರದಲ್ಲಿ ಕೆಲಸ ಮಾಡ್ತಾರೆ. ವ್ಯವಹರಿಸುವ ತಾಳ್ಮೆ ಅವರಿಗಿರುವುದಿಲ್ಲ.

ಯಾರ ಕೈನ ಕೊನೆ ಬೆರಳು, ಉಂಗುರ ಬೆರಳಿನ ಉಗುರಿನವರೆಗೆ ಬರುತ್ತದೆಯೋ ಅಂಥವರು ಭಾಗ್ಯಶಾಲಿಯಾಗಿರುತ್ತಾರೆ. ಬೇಗ ಸಫಲತೆ ಪ್ರಾಪ್ತಿಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular