ಕಾರ್ ಚಾಲಕನಿಗೆ ಬೈಕ್ ನಲ್ಲಿ ಹೋಗ್ತಿದ್ದ ನಾಲ್ವರಿಂದ ಹಲ್ಲೆ; ಡ್ಯಾಶ್ ಕ್ಯಾಮೆರಾದಿಂದ ತಗ್ಲಾಕ್ಕೊಂಡ ಕಿರಾತಕರು

Car Driver Beaten Up By Miscreants Middle Of Road In Delhi, Dash Cam Video  Leads To Arrests | Car Driver Beaten: నడిరోడ్డుపై కార్‌ ఆపి దాడి చేసిన  యువకులు, ఒక్క ట్వీట్‌తో అరెస్ట్ಬೈಕ್ ನಲ್ಲಿ ಹೋಗ್ತಿದ್ದವರು ಕಾರ್ ಚಾಲಕನನ್ನು ಥಳಿಸಿದ್ದು ಕಾರ್ ನಲ್ಲಿದ್ದ ಡ್ಯಾಶ್ ಕ್ಯಾಮೆರಾ ಮೂಲಕ ಆರೋಪಿಗಳನ್ನು ಬಂಧಿಸಿರೋ ಘಟನೆ ದೆಹಲಿಯಲ್ಲಿ ನಡೆದಿದೆ.

ಬೈಕ್‌ನಲ್ಲಿ ಹೋಗುತ್ತಿದ್ದ ನಾಲ್ವರು ಪ್ರವೀಣ್ ಜಂಗ್ರಾ ಎಂಬ ವ್ಯಕ್ತಿಯನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರವೀಣ್ ಜಂಗ್ರಾ ಅವರು ಕ್ರಮ ಕೈಗೊಳ್ಳುವಂತೆ ಟ್ವಿಟರ್‌ನಲ್ಲಿ ದೆಹಲಿ ಪೊಲೀಸರಿಗೆ ಮನವಿ ಮಾಡಿದ ನಂತರ ಅವರನ್ನು ಬಂಧಿಸಲಾಯಿತು. ಮೇ 8 ರಂದು ನಂಗ್ಲೋಯ್ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ.

“ಕೆಲವು ದುಷ್ಕರ್ಮಿಗಳು ನನ್ನನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ಥಳಿಸಿದ್ದಾರೆ. ಇದೆಲ್ಲ ನಡೆದಿದ್ದು ನಂಗ್ಲೋಯ್ ರೈಲು ನಿಲ್ದಾಣದ ಮೆಟ್ರೋದಲ್ಲಿ. ದೇಶದ ರಾಜಧಾನಿಯಲ್ಲಿ ಈ ರೀತಿಯ ಗೂಂಡಾಗಿರಿ ಸಾಮಾನ್ಯವಾಗಿದೆ. ದೆಹಲಿ ಪೊಲೀಸರು ಈ ವಿಷಯವನ್ನು ಪರಿಶೀಲಿಸಬೇಕು ಮತ್ತು ಈ ಗೂಂಡಾಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಜಂಗ್ರಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.

ಡಿಪ್ಪರ್ ಲೈಟ್ ಬಳಕೆಯಿಂದಾಗಿ ಈ ಘಟನೆ ನಡೆದಿದೆ. ಆರೋಪಿಗಳು ಜಂಗ್ರಾ ಅವರ ಕಾರನ್ನು ನಿಲ್ಲಿಸಿ, ಅವರ ಬಳಿಗೆ ಬಂದು ಕಪಾಳಮೋಕ್ಷ ಮಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಜಂಗ್ರಾ ಅವರ ಟ್ವೀಟ್‌ನ ನಂತರ ಹೊರ ದೆಹಲಿಯ ಪೊಲೀಸ್ ಉಪ ಕಮಿಷನರ್ ಹರೇಂದ್ರ ಕೆ ಸಿಂಗ್ ಅವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅವರು ದೂರುದಾರರ ಟ್ವೀಟ್ ಮತ್ತು ಬಂಧಿತ ನಾಲ್ವರ ಫೋಟೋವನ್ನು ಹಂಚಿಕೊಂಡು ಆರೋಪಿಗಳ ಬಂಧನವನ್ನು ಖಚಿತಪಡಿಸಿದ್ದಾರೆ.

https://twitter.com/ParveenHere/status/1655412494981054464?ref_src=twsrc%5Etfw%7Ctwcamp%5Etweetembed%7Ctwterm%5E1655412494981054464%7Ctwgr%5Edb89ee2dd8cba1cb71528aee223d80a055c1ce6b%7Ctwcon%5Es1_&ref_url=https%3A%2F%2Fwww.firstpost.com%2Findia%2Fdelhi-shocker-car-stopped-on-middle-of-road-driver-beaten-dashcam-clip-leads-to-arrests-12574422.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read