HomeAgricultureಕಪ್ಪು ಮೂಲಂಗಿ ಕೃಷಿಯಿಂದ ಬಂಪರ್‌ ಗಳಿಕೆ ಮಾಡ್ತಿದ್ದಾರೆ ರೈತರು; ನಮ್ಮ ಆರೋಗ್ಯಕ್ಕೂ ಇದು ʼಸಂಜೀವಿನಿʼ

ಕಪ್ಪು ಮೂಲಂಗಿ ಕೃಷಿಯಿಂದ ಬಂಪರ್‌ ಗಳಿಕೆ ಮಾಡ್ತಿದ್ದಾರೆ ರೈತರು; ನಮ್ಮ ಆರೋಗ್ಯಕ್ಕೂ ಇದು ʼಸಂಜೀವಿನಿʼ

Black Radish Uses - Helpful Tips On Growing Black Radishes

ಬಿಳಿ ಮೂಲಂಗಿ ಬಗ್ಗೆ ನಮಗೆಲ್ಲಾ ಗೊತ್ತಿದೆ. ಮೂಲಂಗಿ ಸಲಾಡ್‌,  ಪರೋಟ, ಸಾಂಬಾರ್‌, ಪಲ್ಯ, ಉಪ್ಪಿನಕಾಯಿ ಹೀಗೆ ಅನೇಕ ತಿನಿಸುಗಳನ್ನು ತಯಾರಿಸಲಾಗುತ್ತದೆ. ಆದರೆ ನೀವು ಎಂದಾದರೂ ಕಪ್ಪು ಮೂಲಂಗಿ ತಿಂದಿದ್ದೀರಾ? ಕಪ್ಪು ಮೂಲಂಗಿಯ ಬಗ್ಗೆ ಅನೇಕರು ಕೇಳಿರಲಿಕ್ಕಿಲ್ಲ.

ಆದರೆ ರೈತರು ಕಪ್ಪು ಮೂಲಂಗಿ ಕೃಷಿ ಮಾಡಿ ಬಂಪರ್ ಹಣ ಗಳಿಸುತ್ತಿದ್ದಾರೆ.  ಕಪ್ಪು ಮೂಲಂಗಿಯ ಕೃಷಿಯು ಬಿಳಿ ಮೂಲಂಗಿಯಂತೆಯೇ ಇರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಸ್ತವವಾಗಿ ಇದು ಟರ್ನಿಪ್‌ನಂತೆ ಕಾಣುತ್ತದೆ.  ಆದರೆ ಅದರ ಹೊರಭಾಗವು ಸಂಪೂರ್ಣವಾಗಿ ಕಪ್ಪಗಿರುತ್ತದೆ. ಒಳಗಿನಿಂದ ಇದು ಸಾಮಾನ್ಯ ಮೂಲಂಗಿಯಂತೆ ಬಿಳಿಯಾಗಿರುತ್ತದೆ, ಆದರೆ ರುಚಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇದನ್ನು ಶೀತ ವಾತಾವರಣದಲ್ಲಿ ಹೆಚ್ಚು ಬೆಳೆಸಲಾಗುತ್ತದೆ, ಆದರೆ ಈಗ ರೈತರು ಇದನ್ನು ವರ್ಷವಿಡೀ ಬೆಳೆಯುತ್ತಾರೆ.ಇದು ಮಾರುಕಟ್ಟೆಯಲ್ಲಿ ಬಿಳಿ ಮೂಲಂಗಿಗಿಂತ ಹೆಚ್ಚು ದುಬಾರಿಯಾಗಿದೆ. ಭಾರತ ಸೇರಿದಂತೆ ಇಡೀ ವಿಶ್ವದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಕಪ್ಪು ಮೂಲಂಗಿಗೆ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಕಾರಣ ಇದರಲ್ಲಿರುವ ಪೋಷಕಾಂಶಗಳು.

ಕಪ್ಪು ಮೂಲಂಗಿಯ ಪ್ರಯೋಜನಗಳೇನು ?

ಕಪ್ಪು ಮೂಲಂಗಿ ನಮ್ಮ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಿದೆ. ಕಪ್ಪು ಮೂಲಂಗಿಯಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು ಅದು ನಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅದ್ಭುತ ಗುಣವೂ ಇದಕ್ಕಿದೆ.ಇದರೊಳಗಿರುವ ಪ್ರೊಟೀನ್, ವಿಟಮಿನ್-ಬಿ6, ಥಯಾಮಿನ್, ವಿಟಮಿನ್-ಇ ಮುಂತಾದ ಪೋಷಕಾಂಶಗಳು ನಮ್ಮ ದೇಹವನ್ನು ಒಳಗಿನಿಂದ ಸದೃಢಗೊಳಿಸುತ್ತವೆ. ಕಪ್ಪು ಮೂಲಂಗಿಯು ಮಲಬದ್ಧತೆಗೆ ಪರಿಹಾರವನ್ನು ನೀಡುತ್ತದೆ. ಇದರಲ್ಲಿರುವ ಐಸೋಟಿನ್, ಸೋರ್ಬಿಟೋಲ್, ಮ್ಯಾಂಗನೀಸ್ ಮತ್ತು ಫೋಲೇಟ್ ಮಲಬದ್ಧತೆಯನ್ನು ತಡೆಯುತ್ತದೆ.

 

For Latest News Updates, Join Our Whatsapp Community🚩
RELATED ARTICLES

Most Popular