HomeHealthಎಚ್ಚರ...! ನೀವೂ ಫ್ರಿಜ್ ನೀರು ಕುಡಿಯುತ್ತೀರಾ....?

ಎಚ್ಚರ…! ನೀವೂ ಫ್ರಿಜ್ ನೀರು ಕುಡಿಯುತ್ತೀರಾ….?

ಬೇಸಿಗೆಯಲ್ಲಿ ಫ್ರಿಜ್ ನಲ್ಲಿಟ್ಟ ತಣ್ಣನೆಯ ನೀರು ಅಮೃತಕ್ಕೆ ಸಮ. ಸೆಕೆ ಸೆಕೆ ಎನ್ನುವ ಜನರು ಆಗಾಗ ತಣ್ಣನೆಯ ನೀರನ್ನು ಕುಡಿಯುತ್ತಿರುತ್ತಾರೆ. ಬಿಸಿಲ ಧಗೆಗೆ ತಣ್ಣನೆಯ ನೀರು ಹಿತವೆನಿಸಬಹುದು. ಆದ್ರೆ ಫ್ರಿಜ್ ನಲ್ಲಿಟ್ಟ ನೀರು ಆರೋಗ್ಯಕ್ಕೆ ಹಾನಿಕರ. ಮುಖ್ಯವಾಗಿ ಫ್ರಿಜ್ ನಲ್ಲಿಟ್ಟ ನೀರು ಕುಡಿದ್ರೆ ಹೃದಯಾಘಾತವಾಗುವ ಸಾಧ್ಯತೆ ಜಾಸ್ತಿ ಇರುತ್ತದೆ.

ಬಿಸಿಲಿನಿಂದ ಬಂದ ತಕ್ಷಣ ಅನೇಕರು ತಣ್ಣನೆಯ ನೀರನ್ನು ಸೇವಿಸ್ತಾರೆ. ಇದರಿಂದ ಸನ್ ಸ್ಟ್ರೋಕ್ ಆಗುವ ಸಂಭವವಿರುತ್ತದೆ. ಹಾಗಾಗಿ ಬಿಸಿಲಿನಿಂದ ಬಂದ ತಕ್ಷಣ ತಣ್ಣನೆಯ ನೀರು ಕುಡಿಯುವ ಅಭ್ಯಾಸ ನಿಮಗಿದ್ದರೆ ಬಿಟ್ಟುಬಿಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಣ್ಣನೆಯ ನೀರು ಕುಡಿಯುವುದರಿಂದ ಗಂಟಲಿನ ರಕ್ಷಣಾತ್ಮಕ ಪದರದ ಮೇಲೆ ದುಷ್ಪರಿಣಾಮವುಂಟಾಗುತ್ತದೆ. ಇದರಿಂದಾಗಿ ಗಂಟಲಿನ ಸೋಂಕು ಕಾಣಿಸಿಕೊಳ್ಳುತ್ತದೆ.

ಹೃದಯದ ವೇಗಸ್ ನರದ ಮೇಲೆ ತಣ್ಣನೆಯ ನೀರು ಪರಿಣಾಮ ಬೀರುತ್ತದೆ. ಇದರಿಂದಾಗಿ ಹೃದಯ ಬಡಿತದ ವೇಗ ಕಡಿಮೆಯಾಗುತ್ತದೆ. ಇದು ಹೃದಯಾಘಾತದ ಅಪಾಯಕ್ಕೆ ದಾರಿ ಮಾಡಿ ಕೊಡುತ್ತದೆ.

ಆಹಾರ ಸೇವಿಸಿದ ತಕ್ಷಣ ತಣ್ಣನೆಯ ನೀರು ಸೇವನೆ ಜೀರ್ಣಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ. ಇದರಿಂದ ಚಯಾಪಚಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಫ್ರಿಜ್ ನಲ್ಲಿರುವ ನೀರನ್ನು ಸದಾ ಸೇವನೆ ಮಾಡುವುದರಿಂದ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

ತಣ್ಣನೆಯ ನೀರು ಕುಡಿಯುವುದರಿಂದ ಮಲಬದ್ಧತೆ ಹಾಗೂ ಗ್ಯಾಸ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular