HomeAstroಈ ರಾಶಿಯವರಿಗಿದೆ ಇಂದು ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣ

ಈ ರಾಶಿಯವರಿಗಿದೆ ಇಂದು ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣ

ಮೇಷ ರಾಶಿ

ಕೋಪ ಹಾಗೂ ಹಠಮಾರಿತನವನ್ನು ನಿಯಂತ್ರಿಸಿಕೊಳ್ಳಿ. ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆಯ ಅನುಭವವಾಗಲಿದೆ. ಅಧಿಕ ಪರಿಶ್ರಮ ಪಟ್ಟರೂ ತಕ್ಕ ಪ್ರತಿಫಲ ದೊರೆಯದೇ ಇರುವುದರಿಂದ ನಿರಾಸೆ ಆವರಿಸಬಹುದು.

ವೃಷಭ ರಾಶಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿಯೊಂದು ಕಾರ್ಯವನ್ನೂ ದೃಢತೆ ಮತ್ತು ಆತ್ಮವಿಶ್ವಾಸದಿಂದ ಅತ್ಯಂತ ಪರಿಶ್ರಮ ವಹಿಸಿ ಮಾಡಿ ಅದಕ್ಕೆ ತಕ್ಕ ಫಲವನ್ನು ಪಡೆಯುತ್ತೀರಿ. ತಂದೆ ಅಥವಾ ಪ್ರತ್ಯೇಕ ಸಂಪತ್ತಿನಿಂದ ಲಾಭವಾಗಲಿದೆ. ಸರ್ಕಾರಿ ಆರ್ಥಿಕ ವ್ಯವಹಾರಗಳಲ್ಲಿ ಲಾಭವಿದೆ.

ಮಿಥುನ ರಾಶಿ

ಹೊಸ ಯೋಜನೆಗಳನ್ನು ಆರಂಭಿಸಲು ಶುಭದಿನ. ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳು ಮತ್ತು ಸರ್ಕಾರದಿಂದ ಸೂಕ್ತ ಸ್ಥಾನಮಾನ ಸಿಗಲಿದೆ. ಯಾವುದೇ ಹೊಸ ಕಾರ್ಯವನ್ನು ನೀವು ಇವತ್ತು ಆರಂಭಿಸಬಹುದು.

ಕರ್ಕ ರಾಶಿ

ಇವತ್ತು ನಿಮ್ಮ ಕೆಲಸಗಳೆಲ್ಲವೂ ಸಫಲವಾಗಲಿವೆ. ಗೃಹಸ್ಥ ಜೀವನದಲ್ಲೂ ಆನಂದದ ಅನುಭವವಾಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಸಮಾಜದಲ್ಲಿ ಗೌರವ ದೊರೆಯುತ್ತದೆ. ಅಧಿಕಾರಿಗಳು ಮತ್ತು ಹಿರಿಯರ ಕೃಪಾದೃಷ್ಟಿ ನಿಮ್ಮ ಮೇಲಿದೆ.

ಸಿಂಹ ರಾಶಿ

ಆತ್ಮವಿಶ್ವಾಸದಿಂದಾಗಿ ಇವತ್ತು ಎಲ್ಲಾ ಕೆಲಸಗಳಲ್ಲೂ ಶೀಘ್ರ ನಿರ್ಣಯ ತೆಗೆದುಕೊಳ್ಳುತ್ತೀರಿ. ತಂದೆ ಮತ್ತು ಹಿರಿಯರ ಸಹಯೋಗ ದೊರೆಯಲಿದೆ. ಸಾಮಾಜಿಕ ಪ್ರತಿಷ್ಠೆಯಲ್ಲಿ ವೃದ್ಧಿಯಾಗಲಿದೆ. ಕ್ರೋಧ ಮತ್ತು ವ್ಯಗ್ರತೆ ಹೆಚ್ಚಾಗಲಿದೆ. ಅವುಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ.

ಕನ್ಯಾ ರಾಶಿ

ನಿಮ್ಮ ಅಹಂನಿಂದಾಗಿ ತಕರಾರು ಉಂಟಾಗುವ ಸಾಧ್ಯತೆ ಇದೆ. ಶಾರೀರಿಕ ಮತ್ತು ಮಾನಸಿಕ ಚಿಂತೆಯಿಂದ ಮನಸ್ಸು ವ್ಯಾಕುಲಗೊಳ್ಳುತ್ತದೆ. ಅಂದುಕೊಂಡ ಕೆಲಸ ಕೈಗೂಡುವುದಿಲ್ಲ. ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಜಗಳವಾಗುವ ಸಾಧ್ಯತೆ ಇದೆ.

ತುಲಾ ರಾಶಿ

ಗೃಹಸ್ಥ ಜೀವನದಲ್ಲಿ ಸುಖ ಮತ್ತು ಆನಂದ ದೊರೆಯುತ್ತದೆ. ಆದಾಯ ವೃದ್ಧಿಯಾಗುವ ಸಾಧ್ಯತೆ ಇದೆ. ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣವಿರಲಿದೆ. ಪದೋನ್ನತಿಯ ಸಾಧ್ಯತೆಗಳಿವೆ. ಕುಟುಂಬಸ್ಥರು ಮತ್ತು ಮಿತ್ರರೊಂದಿಗೆ ಸ್ನೇಹದಿಂದಿರುತ್ತೀರಿ.

ವೃಶ್ಚಿಕ ರಾಶಿ

ನಕಾರಾತ್ಮಕ ವ್ಯವಹಾರ ಮತ್ತು ತಪ್ಪು ತಿಳುವಳಿಕೆ ನಿಮ್ಮನ್ನು ಗೊಂದಲಕ್ಕೀಡು ಮಾಡಲಿದೆ. ಕಣ್ಣುಗಳಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಕುಟುಂಬ ಸದಸ್ಯರ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಕೆಲಸದ ವಿಚಾರದಲ್ಲಿ ಸಂತೋಷ ಸಿಗಲಿದೆ.

ಧನು ರಾಶಿ

ಶರೀರದಲ್ಲಿ ಆಯಾಸದ ಅನುಭವವಾಗಲಿದೆ, ಮನಸ್ಸು ಆತಂಕಗೊಳ್ಳಲಿದೆ. ಆರೋಗ್ಯ ಸ್ವಲ್ಪ ಏರುಪೇರಾಗಬಹುದು. ಮನಸ್ಸು ಕೂಡ ವ್ಯಾಕುಲಗೊಳ್ಳಲಿದೆ. ಯಾವುದೇ ಪ್ರವಾಸ ಅಥವಾ ಯಾತ್ರೆ ಕೈಗೊಳ್ಳುವವರಿದ್ದರೆ ಅದನ್ನು ಸ್ಥಗಿತಗೊಳಿಸುವುದು ಉತ್ತಮ.

ಮಕರ ರಾಶಿ

ನಕಾರಾತ್ಮಕ ವಿಷಯಗಳಿಂದ ದೂರವೇ ಇರಿ. ಊಟ- ತಿಂಡಿ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಿ. ಆಕಸ್ಮಿಕ ಖರ್ಚು ಎದುರಾಗಬಹುದು. ಚಿಕಿತ್ಸೆಗಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ. ಪ್ಯಾಪಾರದಲ್ಲಿ ಪಾಲುದಾರರ ಜೊತೆಗೆ ಆಂತರಿಕ ಭಿನ್ನಾಭಿಪ್ರಾಯ ಉಂಟಾಗಲಿದೆ.

ಕುಂಭ ರಾಶಿ

ಪ್ರಯಾಣ, ರೊಮ್ಯಾನ್ಸ್, ಪ್ರಯಾಣ ಮತ್ತು ಮನರಂಜನೆ ಇವತ್ತಿನ ದಿನದ ಭಾಗವಾಗಲಿದೆ. ಕುಟುಂಬದವರು ಮತ್ತು ಸ್ನೇಹಿತರ ಜೊತೆಗೆ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದೀರಿ. ವಸ್ತ್ರ ಮತ್ತು ವಾಹನ ಪ್ರಾಪ್ತಿಯಾಗಲಿದೆ.

ಮೀನ ರಾಶಿ

ದಿನದ ಕೆಲಸಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳಲಿವೆ. ಮನೆಯಲ್ಲಿ ಸುಖ- ಶಾಂತಿಯ ವಾತಾವರಣವಿರಲಿದೆ. ಮಾತು ಮತ್ತು ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ಪ್ರತಿಸ್ಪರ್ಧಿಗಳ ವಿರುದ್ಧ ಜಯ ನಿಮ್ಮದಾಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular