
ಲೋಕಾಯುಕ್ತ ದಾಳಿ ಕುರಿತು ಮಾದ್ಯಮಗಳ ಮೂಲಕ ನನಗೆ ತಿಳಿದಿದೆ. ಈ ವಿಚಾರ ಈಗ ವಿಚಾರಣೆ ಹಂತದಲ್ಲಿದೆ. ಈ ಬಗ್ಗೆ ನಾನು ಈಗಲೇ ಪ್ರತಿಕ್ರಿಯಿಸುವುದಿಲ್ಲ. ನಾಲ್ಕೈದು ಜನರನ್ನು ಅರೆಸ್ಟ್ ಮಾಡಿದ್ದಾರೆ ಎಂದಿದ್ದಾರೆ.
ಯಾವ ಹಣ ಅವರು ಇಟ್ಟುಕೊಂಡಿದ್ದರು ಎಂದು ತಿಳಿದಿಲ್ಲ. ವಿಚಾರಣೆ ಬಳಿಕ ಈ ಬಗ್ಗೆ ತಿಳಿಯಲಿದೆ ಎಂದರು. ನಿನ್ನೆ ಮಾಡಾಳ್ ವಿರೂಪಾಕ್ಷಪ್ಪನವರ ದ್ವಿತೀಯ ಪುತ್ರ ಪ್ರಶಾಂತ್ ಮಾಡಾಳ್ ರಾಸಾಯನಿಕ ಟೆಂಡರ್ ವಿಚಾರದಲ್ಲಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು 40 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ ನಡೆದಿತ್ತು.

