HomeLifestyleಇಲ್ಲಿದೆ ರುಚಿಕರ ಸುವರ್ಣ ಗಡ್ಡೆ ಕಬಾಬ್ ತಯಾರಿಸುವ ವಿಧಾನ

ಇಲ್ಲಿದೆ ರುಚಿಕರ ಸುವರ್ಣ ಗಡ್ಡೆ ಕಬಾಬ್ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು: ಸುವರ್ಣ ಗಡ್ಡೆ 1 ಕಪ್, ನಿಂಬೆರಸ 2 ಚಮಚ, ಮೈದಾ ಹಿಟ್ಟು 3 ಚಮಚ, ಮೆಣಸಿನ ಪುಡಿ 2 ಚಮಚ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಜೀರಿಗೆ ಪುಡಿ ಅರ್ಧ ಚಮಚ, ಅರಿಶಿನ ಪುಡಿ ಕಾಲು ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ನೀರಿನಂಶವಿಲ್ಲದ ಸುವರ್ಣ ಗಡ್ಡೆಯನ್ನು ಸಿಪ್ಪೆ ತೆಗೆದು, ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ನಂತರ ಮೈದಾ ಹಿಟ್ಟು, ಕಡಲೆ ಹಿಟ್ಟು, ಮೆಣಸಿನ ಪುಡಿ, ನಿಂಬೆರಸ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲೆಸಿ.

ಕತ್ತರಿಸಿದ ಸುವರ್ಣ ಗಡ್ಡೆಯನ್ನು ಅದಕ್ಕೆ ಸೇರಿಸಿ 10 ನಿಮಿಷ ಇಟ್ಟು ನಂತರ ಕಾದ ಎಣ್ಣೆಗೆ ಹಾಕಿ. ಸುವರ್ಣ ಗಡ್ಡೆ ಬೇಯುವವರೆಗೂ ಫ್ರೈ ಮಾಡಿ. ಸಿದ್ದವಾದ ಸುವರ್ಣ ಗಡ್ಡೆ ಕಬಾಬ್ ಅನ್ನು ಟೊಮಾಟೊ ಸಾಸ್ ಜೊತೆ ತಿಂದರೆ ರುಚಿಕರವಾಗಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular