ಇಲ್ಲಿದೆ ಪುದೀನಾ ಚಟ್ನಿಪುಡಿ ಮಾಡುವ ವಿಧಾನ

ಬಿಸಿ ಅನ್ನಕ್ಕೆ ತುಪ್ಪ ಹಾಕಿಕೊಂಡು ಪುದೀನಾ ಪುಡಿ ಸೇರಿಸಿ ತಿನ್ನುತ್ತಿದ್ದರೆ ಯಾವ ಸಾಂಬಾರು ಕೂಡ ಬೇಡ ಅನಿಸುತ್ತೆ. ಹಾಗೇ ದೋಸೆ, ಇಡ್ಲಿಗೂ ಈ ಪುದೀನಾ ಚಟ್ನಿಪುಡಿ ಸಖತ್ ಕಾಂಬಿನೇಷನ್.

ಬೇಕಾಗುವ ಸಾಮಗ್ರಿಗಳು:

2 ಕಟ್ಟು – ಪುದೀನಾ, ಎಣ್ಣೆ – 1 ಟೀ ಸ್ಪೂನ್, ಉದ್ದಿನಬೇಳೆ – 3 ಟೇಬಲ್ ಸ್ಪೂನ್, ಕಡಲೆಬೇಳೆ – 1/4 ಕಪ್, ಕೆಂಪುಮೆಣಸು – 4, ಹಿಂಗು – ಚಿಟಿಕೆ, ಹುಣಸೆಹಣ್ಣು – ಸಣ್ಣ ಪೀಸ್, ಕಾಳುಮೆಣಸು – 1/2 ಟೀ ಸ್ಪೂನ್, ಜೀರಿಗೆ – 1 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:

ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಉದ್ದಿನಬೇಳೆ, ಕಡಲೆಬೇಳೆ, ಒಣಮೆಣಸು, ಇಂಗು, ಹುಣಸೆಹಣ್ಣು ಹಾಕಿ ಫ್ರೈ ಮಾಡಿಕೊಳ್ಳಿ. ಇದು ಕೆಂಪಾಗುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ.

ನಂತರ ಇದೇ ಪ್ಯಾನ್ ಗೆ ಜೀರಿಗೆ, ಕಾಳುಮೆಣಸು ಸೇರಿಸಿ ಫ್ರೈ ಮಾಡಿ ಪ್ಲೇಟ್ ಗೆ ತೆಗೆದಿಟ್ಟುಕೊಳ್ಳಿ. ಚೆನ್ನಾಗಿ ತೊಳೆದು ನೀರಿನ ಪಸೆಯೆಲ್ಲಾ ಆರಿದ ಪುದೀನಾ ಸೊಪ್ಪನ್ನು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಎಲೆಗಳೆಲ್ಲಾ ಗರಿ ಗರಿಯಾಗುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ.

ನಂತರ ಮಿಕ್ಸಿ ಜಾರಿಗೆ ಹುರಿದಿಟ್ಟುಕೊಂಡ ಮಿಶ್ರಣವನ್ನೆಲ್ಲಾ ಸೇರಿಸಿ ತುಸು ಉಪ್ಪು ಹಾಕಿ ರುಬ್ಬಿಕೊಳ್ಳಿ. ನಂತರ ಪುದೀನಾ ಸೊಪ್ಪು ಸೇರಿಸಿ ತರಿ ತರಿಯಾಗಿ ರುಬ್ಬಿಕೊಂಡು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಟ್ಟುಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read