HomeLifestyleಇಲ್ಲಿದೆ ಎಲೆಕೋಸಿನ ಚಟ್ನಿ ತಯಾರಿಸುವ ವಿಧಾನ

ಇಲ್ಲಿದೆ ಎಲೆಕೋಸಿನ ಚಟ್ನಿ ತಯಾರಿಸುವ ವಿಧಾನ

ಎಲೆಕೋಸು ಎಲ್ಲರಿಗೂ ಗೊತ್ತಿರೋ ಹಾಗೆ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಎಲೆಕೋಸು ಕೇವಲ ಪಲ್ಯ ಅಥವಾ ಸಾಂಬಾರಿಗೆ ಬಳಸುತ್ತೇವೆ. ಎಲೆಕೋಸಿನ ಚಟ್ನಿಯನ್ನು ತಯಾರಿಸಬಹುದು ಗೊತ್ತಾ. ಅದನ್ನು ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲೆಕೋಸಿನ ತುರಿ 1 1/2 ಕಪ್
ಹುಣಸೆ ಹಣ್ಣಿನ ರಸ 1 ಚಮಚ
ಹಸಿಮೆಣಸಿನಕಾಯಿ 4
ಜೀರಿಗೆ 1/4 ಚಮಚ
ಅರಿಶಿಣ ಸ್ವಲ್ಪ
ಒಗ್ಗರಣೆಗೆ
ಒಣಮೆಣಸಿನಕಾಯಿ, ಉದ್ದಿನಬೇಳೆ, ಕಡಲೆಬೇಳೆ, ಜೀರಿಗೆ, ಸಾಸಿವೆ, ಉಪ್ಪು, ಎಣ್ಣೆ, ಬೆಳ್ಳುಳ್ಳಿ ಎಸಳು.

ಮಾಡುವ ವಿಧಾನ

ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಕ್ಯಾಬೇಜ್ ತುರಿ, ಹಸಿ ಮೆಣಸಿನಕಾಯಿ, ಅರಿಶಿಣ ಹಾಕಿ ಚೆನ್ನಾಗಿ ಬೇಯಿಸಿ.

ನಂತರ ಹುಣಸೆಹಣ್ಣು ನೆನಸಿ ಸೋಸಿದ ರಸ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಅದರಲ್ಲಿ ಹಾಕಿ ಕೈಯಾಡಿಸಿ.

ಮಿಶ್ರಣ ತಣ್ಣಗಾದ ಬಳಿಕ ನುಣ್ಣಗೆ ರುಬ್ಬಿಕೊಳ್ಳಿ. ತಯಾರಾದ ಚಟ್ನಿಗೆ ಒಗ್ಗರಣೆ ಹಾಕಿ ಸವಿದರೆ ರುಚಿಯಾಗಿರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular