HomeKarnatakaಆಸ್ಪತ್ರೆ ಆವರಣದಲ್ಲೇ ಮಗು ಹೆತ್ತ ಗರ್ಭಿಣಿ....!

ಆಸ್ಪತ್ರೆ ಆವರಣದಲ್ಲೇ ಮಗು ಹೆತ್ತ ಗರ್ಭಿಣಿ….!

ಹೆರಿಗೆಗೆಂದು ತಮ್ಮ ಕುಟುಂಬದೊಂದಿಗೆ ಆಸ್ಪತ್ರೆಗೆ ಆಗಮಿಸುತ್ತಿದ್ದ ಗರ್ಭಿಣಿಯೊಬ್ಬರು ದಾಖಲಾಗುವ ಮುನ್ನವೇ ಆಸ್ಪತ್ರೆ ಆವರಣದಲ್ಲಿಯೇ ಮಗು ಹೆತ್ತಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ ತಾಲೂಕಿನ ಚೌಹಾಣ್ ದೊಡ್ಡಿಯ ಅನು ಬೇವು ಕೋಳೆಕರ ಮಗು ಹೆತ್ತವರಾಗಿದ್ದು ಇವರು ನಾಗಠಾಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವಾಗ ಆಸ್ಪತ್ರೆ ಆವರಣದಲ್ಲಿಯೇ ಹೆರಿಗೆಯಾಗಿದೆ.

ಆದರೆ ಸಿಬ್ಬಂದಿ ಅರ್ಧ ಗಂಟೆಯಾದರೂ ಬಾರದ ಕಾರಣ ಹೊಕ್ಕಳ ಹುರಿ ಕತ್ತರಿಸದೆ ಅವರು ನರಳಾಡಿದ್ದು, ಆ ಬಳಿಕ ಆಗಮಿಸಿದ ಸಿಬ್ಬಂದಿ ಪ್ರಸವ ಕಾರ್ಯ ಪೂರ್ಣಗೊಳಿಸಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular