HomeKarnatakaಅಪಘಾತಕ್ಕೊಳಗಾಗಿ ನರಳಾಡುತ್ತಿದ್ದ ಯುವಕನಿಗೆ ನೆರವು; ಯೋಧರ ಮಾನವೀಯ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

ಅಪಘಾತಕ್ಕೊಳಗಾಗಿ ನರಳಾಡುತ್ತಿದ್ದ ಯುವಕನಿಗೆ ನೆರವು; ಯೋಧರ ಮಾನವೀಯ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

ಭಾರತೀಯ ಯೋಧರು ಗಡಿ ಕಾಯುವ ಮೂಲಕ ದೇಶ ರಕ್ಷಣೆ ಜೊತೆ ಜೊತೆಗೆ ನಾಗರೀಕರನ್ನೂ ಸಹ ಶತ್ರು ರಾಷ್ಟ್ರಗಳ ಅಪಾಯದಿಂದ ರಕ್ಷಿಸುತ್ತಾರೆ. ಅಷ್ಟೇ ಅಲ್ಲ, ಸಂದರ್ಭ ಬಂದಾಗ ದೇಶದೊಳಗಿನ ನಾಗರಿಕರ ನೆರವಿಗೂ ಸಿದ್ಧವಾಗುತ್ತಾರೆ ಎಂಬುದಕ್ಕೆ ಇಲ್ಲಿದೆ ಮತ್ತೊಂದು ಉದಾಹರಣೆ.

ಹೌದು, ರಸ್ತೆಯಲ್ಲಿ ಸಾಗುತ್ತಿದ್ದ ಸೈನಿಕರ ತಂಡವೊಂದು ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಯುವಕನೊಬ್ಬನಿಗೆ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಇಂತಹದೊಂದು ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಬುಧವಾರದಂದು ನಡೆದಿದೆ.

ಸಶಸ್ತ್ರ ಸೀಮಾ ಬಲ ಸೈನಿಕರ ವೈದ್ಯಕೀಯ ತಂಡ ಬಾಗಲಕೋಟೆಯಿಂದ ಮುಧೋಳ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಹೆಬ್ಬಾಳ ಕ್ರಾಸ್ ಬಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಕಂಡಿದ್ದಾರೆ. ಕೂಡಲೇ ವಾಹನ ನಿಲ್ಲಿಸಿದ ಸೈನಿಕರ ತಂಡದ ಕಮಾಂಡರ್ ಡಾ. ರೇಜೂರ್, ರೆಹಮಾನ್ ಅನ್ಸಾರಿ ಯುವಕನ ಬಳಿ ತೆರಳಿ ಪ್ರಥಮ ಚಿಕಿತ್ಸೆ ನೀಡಿ ಚೇತರಿಸಿಕೊಳ್ಳಲು ನೆರವಾಗಿದ್ದಾರೆ. ಸೈನಿಕರ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular