ಅನೈತಿಕ ಸಂಬಂಧಕ್ಕೆ ವ್ಯಕ್ತಿ ಬಲಿ; ಲಾಡ್ಜ್ ನಲ್ಲೇ ಚಾಕುವಿನಿಂದ ಕತ್ತು ಇರಿದ ಮಹಿಳೆ

ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ತಾನು ಸಂಪರ್ಕದಲ್ಲಿದ್ದ ಮಹಿಳೆಯಿಂದಲೇ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಜಾವಗಲ್ ನ ಷೇಕ್ ಪರ್ವೇಜ್ ಕೊಲೆಯಾದ ವ್ಯಕ್ತಿಯಾಗಿದ್ದು, ಈತ ಚನ್ನರಾಯಪಟ್ಟಣದ ಆಯೇಶಾ ಎಂಬಾಕೆಯೊಂದಿಗೆ ಗುರುವಾರದಂದು ಭದ್ರಾವತಿಯ ಬಿಎಚ್ ರಸ್ತೆಯಲ್ಲಿರುವ ಲಾಡ್ಜ್ ನಲ್ಲಿ ತಂಗಿದ್ದ.

ಅಂದು ರಾತ್ರಿ ಅವರಿಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಆಯೇಶಾ, ಚಾಕುವಿನಿಂದ ಶೇಕ್ ಪರ್ವೇಜ್ ಗೆ ಇರಿದಿದ್ದಾಳೆ ಎನ್ನಲಾಗಿದೆ. ಬಳಿಕ ಅಲ್ಲಿಂದ ತೆರಳಿದ್ದ ಆಕೆ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read