HomeCrimeಅತ್ಯಾಚಾರಕ್ಕೊಳಗಾಗಿ ಮಗು ಹೆತ್ತಿದ್ದ ಬಾಲಕಿಗೀಗ ಮತ್ತೊಂದು ಮಗು; ರಾಜಿ ಮಾಡಿಕೊಂಡು ಜೈಲಿಂದ ಬಂದವನಿಂದಲೇ ಮತ್ತೆ ಕೃತ್ಯ

ಅತ್ಯಾಚಾರಕ್ಕೊಳಗಾಗಿ ಮಗು ಹೆತ್ತಿದ್ದ ಬಾಲಕಿಗೀಗ ಮತ್ತೊಂದು ಮಗು; ರಾಜಿ ಮಾಡಿಕೊಂಡು ಜೈಲಿಂದ ಬಂದವನಿಂದಲೇ ಮತ್ತೆ ಕೃತ್ಯ

ಯುವಕನೊಬ್ಬನಿಂದ ಅತ್ಯಾಚಾರಕ್ಕೊಳಗಾಗಿ ಎರಡು ವರ್ಷಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದ ಅಪ್ರಾಪ್ತೆ ಈಗ ಮತ್ತೆ ಅದೇ ಆರೋಪಿಯಿಂದ ಗರ್ಭಿಣಿಯಾಗಿ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾಳೆ. ಇಂತಹದೊಂದು ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣದ ವಿವರ: ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯತಿ ವ್ಯಾಪ್ತಿಯ ಯುವಕನೊಬ್ಬ ಎರಡು ವರ್ಷಗಳ ಹಿಂದೆ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಇದರ ಪರಿಣಾಮ ಆಕೆ ಗರ್ಭಿಣಿಯಾಗಿದ್ದು, ಶಿವಮೊಗ್ಗ ಸುರಭಿ ಕೇಂದ್ರದಲ್ಲಿ ನಾಲ್ಕು ತಿಂಗಳಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಳು ಈ ಮಗುವನ್ನು ದತ್ತು ಕೇಂದ್ರಕ್ಕೆ ನೀಡಲಾಗಿತ್ತು.

ಈ ಪ್ರಕರಣದಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕೇಸು ದಾಖಲಿಸಿ ಜೈಲಿಗೆ ಕಳುಹಿಸಲಾಗಿದ್ದು, ಏಳು ತಿಂಗಳ ಬಳಿಕ ರಾಜಿ ಮಾಡಿಕೊಂಡು ಯುವಕ ಜೈಲಿನಿಂದ ಹೊರ ಬಂದಿದ್ದ. ಈತ ಮತ್ತೆ ಬಾಲಕಿ ಜೊತೆ ಸಂಪರ್ಕ ಬೆಳೆಸಿದ್ದು, ನಿನ್ನನ್ನೇ ಮದುವೆಯಾಗುವುದಾಗಿ ಆಕೆಯನ್ನು ನಂಬಿಸಿದ್ದಾನೆ. ಜೊತೆಗೆ ದೇವಾಲಯ ಒಂದರಲ್ಲಿ ತಾಳಿಯನ್ನೂ ಕಟ್ಟಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈತನ ಮಾತು ನಂಬಿದ ಬಾಲಕಿ ಆತನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದು, ಗರ್ಭಿಣಿಯಾಗಿದ್ದ ಆಕೆ ಫೆಬ್ರವರಿ 20ರಂದು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದೀಗ ಯುವಕನ ವಿರುದ್ಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತೆ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular