
ಅದರಲ್ಲೂ ಏಪ್ರಿಲ್ 22ರಂದು ಅಕ್ಷಯ ತೃತೀಯವಿದ್ದು, ಆ ದಿನದಂದು ಚಿನ್ನ ಖರೀದಿಸಿದರೆ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಚಿನ್ನದ ಬೆಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿದ್ದು, ಖರೀದಿಸಲು ಹೋಗುವವರಿಗೆ ಕೈ ಸುಡುತ್ತಿದೆ. ಮುಂದಿನ ದಿನಗಳಲ್ಲಿ ಇದೇ ಪ್ರವೃತ್ತಿ ಮುಂದುವರೆಯಲಿದೆ ಎಂದು ಹೇಳಲಾಗಿದೆ.
ಇದೆ ಟ್ರೆಂಡ್ ಮುಂದುವರೆದರೆ ಈ ವರ್ಷ 10 ಗ್ರಾಂ ಚಿನ್ನದ ಬೆಲೆ 65,000 ರೂಪಾಯಿಗಳಿಗೆ ತಲುಪಲಿದೆ ಎಂದು ಹೇಳಲಾಗಿದ್ದು, ಬೆಳ್ಳಿ ಬೆಲೆಯಲ್ಲೂ ಹೆಚ್ಚಳವಾಗುವ ಮೂಲಕ ಕೆಜಿಗೆ 90,000 ರೂಪಾಯಿ ಆಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸಿವೆ. 2020 ರಿಂದಲೂ ಚಿನ್ನ – ಬೆಳ್ಳಿ ಬೆಲೆ ಏರುಮುಖವಾಗುತ್ತಿದ್ದು, ಈ ವರ್ಷ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.

