HomeAstroʼಮೀಸೆʼ ಬಿಡುವ ವಿಧಾನ ಹೇಳುತ್ತೆ ಪುರುಷನ ಸ್ವಭಾವ

ʼಮೀಸೆʼ ಬಿಡುವ ವಿಧಾನ ಹೇಳುತ್ತೆ ಪುರುಷನ ಸ್ವಭಾವ

ಇತ್ತೀಚಿನ ದಿನಗಳಲ್ಲಿ ಗಡ್ಡ, ಮೀಸೆ ಬಿಡುವುದು ಫ್ಯಾಷನ್ ಆಗಿದೆ. ಹುಡುಗರು ಕ್ಲೀನ್ ಶೇವ್ ಮಾಡುವ ಬದಲು ಗಡ್ಡ, ಮೀಸೆ ಬಿಡ್ತಿದ್ದಾರೆ. ಮೀಸೆ ಹೊಂದಿರುವ ವ್ಯಕ್ತಿಯ ಸ್ವಭಾವವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ರಾಜನಂತಹ ಮೀಸೆ ಹೊಂದಿರುವ ವ್ಯಕ್ತಿ ಧೈರ್ಯಶಾಲಿ, ನಿರ್ಭೀತ ಮತ್ತು ಧೈರ್ಯಶಾಲಿಯಾಗಿರುತ್ತಾನೆ. ಅವನು ಶೀಘ್ರದಲ್ಲೇ ಕೋಪಗೊಳ್ಳುತ್ತಾನೆ. ಹೆಂಡತಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಗುವ ಮೀಸೆ ಹೊಂದಿರುವ ಪುರುಷರು ತುಂಬಾ ಭಾವನಾತ್ಮಕ ಮತ್ತು ಮೃದು ಹೃದಯದವರು ಎಂದು ಹೇಳಲಾಗುತ್ತದೆ. ಇಂತಹ ವ್ಯಕ್ತಿಗಳಲ್ಲಿ ತಾಳ್ಮೆ ಮತ್ತು ಸಹನೆ ಕಂಡು ಬರುತ್ತದೆ.

ಕತ್ತಿಯಂತೆ ಮೀಸೆ ಇರುವ ಜನರು ನಾಟಕೀಯವಾಗಿರುತ್ತಾರೆ. ಒಳಗಿನಿಂದ ಟೊಳ್ಳು ಸ್ವಭಾವ ಹೊಂದಿರುತ್ತಾರೆ. ಆಂತರಿಕ ಸ್ವರೂಪ ವಿಭಿನ್ನವಾಗಿರುತ್ತದೆ. ತಮ್ಮ ಮನಸ್ಸಿನ ಮಾತನ್ನು ಯಾರಿಗೂ ಹೇಳುವುದಿಲ್ಲ. ವಿವಾದಾಸ್ಪದ ಸ್ವಭಾವ ಹೊಂದಿರುತ್ತಾರೆ.

ಸಣ್ಣ ಮೀಸೆ ಹೊಂದಿರುವ ಜನರು ಸ್ವಭಾವತಃ ಬಹಳ ಚಾಣಾಕ್ಷರು. ಬುದ್ಧಿ ಶಕ್ತಿ ವೇಗವಾಗಿರುತ್ತದೆ.

ಕ್ಲೀನ್ ಶೇವ್ ಮಾಡಲು ಇಷ್ಟಪಡುವ ಪುರುಷರು ಸಮಯಪ್ರಜ್ಞೆ ಮತ್ತು ಶಿಸ್ತುಬದ್ಧರಾಗಿರುತ್ತಾರೆ. ತತ್ವಗಳನ್ನು ಅನುಸರಿಸುತ್ತಾರೆ. ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಮೊಂಡು ಸ್ವಭಾವ ಹೊಂದಿರುತ್ತಾರೆ.

For Latest News Updates, Join Our Whatsapp Community🚩
RELATED ARTICLES

Most Popular