HomeLatest Newsಕರುವಿಗೆ ಕಚ್ಚಿದ ನಾಯಿ: ಕೋಪದಲ್ಲಿ 15 ನಾಯಿಗಳನ್ನು ಕೊಂದ ತಂದೆ-ಮಗ ಅರೆಸ್ಟ್

ಕರುವಿಗೆ ಕಚ್ಚಿದ ನಾಯಿ: ಕೋಪದಲ್ಲಿ 15 ನಾಯಿಗಳನ್ನು ಕೊಂದ ತಂದೆ-ಮಗ ಅರೆಸ್ಟ್

ಹರ್ಯಾಣ: ಹಸುವಿನ ಕರುವಿಗೆ ನಾಯಿ ಕಚ್ಚಿ ಗಾಯಗೊಳಿಸಿದ್ದಕ್ಕೆ ಕೋಪಗೊಂಡ ತಂದೆ-ಮಗ 15 ನಾಯಿಗಳನ್ನು ಬಡಿಗೆಯಿಂದ ಬಡಿದು ಸಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹರಿಯಾಣದ ರೇವಾರಿ ಜಿಲ್ಲೆಯ ರಾಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಕರಣ ಸಂಬಂಧ ತಂದೆ ಮತ್ತು ಮಗ ಸೇರಿದಂತೆ ಮೂವರನ್ನು ರೇವಾರಿ ಪೊಲೀಸರು ಬಂಧಿಸಿದ್ದಾರೆ. ರವಿಕಾಂತ್, ಶಿವಲಾಲ್ ಮತ್ತು ರಾಹುಲ್ ಬಂಧಿತ ಆರೋಪಿಗಳು.

ನಾಯಿಯೊಂದು ಕರುವಿಗೆ ಕಚ್ಚಿದ್ದರಿಂದ ಕೋಪಗೊಂಡ ತಂದೆ, ಮಗ ಮತ್ತು ಇನ್ನೊಬ್ಬ ವ್ಯಕ್ತಿ ಎರಡು ದಿನಗಳಲ್ಲಿ 15 ನಾಯಿಗಳನ್ನು ಕೊಂದು ಹಾಕಿದ್ದಾರೆ. ಘಟನೆಯು ಇಡೀ ಗ್ರಾಮದಲ್ಲಿ ಭೀತಿಯನ್ನು ಸೃಷ್ಟಿಸಿದೆ. ಸತ್ತ ನಾಯಿಗಳಲ್ಲಿ ಹೆಚ್ಚಿನವು ಪುಟ್ಟ ಪುಟ್ಟ ಮರಿಗಳಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೂರ್ನಾಲ್ಕು ಜನರು ಸೇರಿಕೊಂಡು ಗ್ರಾಮದ ಬೀದಿಗಳಲ್ಲಿ ಕೋಲುಗಳನ್ನು ಹಿಡಿದು ಸಿಕ್ಕ ಸಿಕ್ಕ ನಾಯಿಗಳನ್ನು ಹೊಡೆದಿದ್ದಾರೆ. ಇವರ ಹೊಡೆತಕ್ಕೆ 15 ನಾಯಿಗಳು ಮೃತಪಟ್ಟಿವೆ. ಮಹಿಳೆಯರು ಮತ್ತು ಮಕ್ಕಳು ಮನೆಗಳಿಂದ ಹೊರಬರಲು ಹೆದರುತ್ತಿದ್ದಾರೆ. ರಾಂಪುರ ರಸ್ತೆಯ ಕಾಲೇಜಿನ ಹಿಂದಿನ ದನದ ಕೊಟ್ಟಿಗೆಯಲ್ಲಿ ನಾಯಿಯೊಂದು ಹಸುವಿನ ಕರುವನ್ನು ಕಚ್ಚಿದೆ. ಈ ಸಿಟ್ಟಿನಲ್ಲಿ ಹಸುವಿನ ಮಾಲೀಕರು ಗ್ರಾಮದ ಬೀದಿಗಳಲ್ಲಿ ಸುತ್ತಾಡಿ, ಎರಡು ದಿನಗಳಲ್ಲಿ 15 ನಾಯಿಗಳನ್ನು ಕೋಲುಗಳಿಂದ ದಾಳಿ ಮಾಡಿ ಕೊಂದು ಹಾಕಿದ್ದಾರೆ ಎಂದು ರಾಂಪುರ ಗ್ರಾಮದ ಸರಪಂಚ್ ನರೇಶ್ ಯಾದವ್ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ, ಪೊಲೀಸರು ಪ್ರಾಣಿಗಳ ಮೇಲಿನ ಕ್ರೌರ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular