HomeKarnatakaಅಪಘಾತದ ತನಿಖೆಯಲ್ಲಿ ಬಯಲಾಯ್ತು 30 ಲಕ್ಷ ರೂ. ವಿಮೆ ಹಣದ ಆಸೆಗೆ ತಮ್ಮನನ್ನೇ ಕೊಲೆಗೈದ ಅಣ್ಣನ...

ಅಪಘಾತದ ತನಿಖೆಯಲ್ಲಿ ಬಯಲಾಯ್ತು 30 ಲಕ್ಷ ರೂ. ವಿಮೆ ಹಣದ ಆಸೆಗೆ ತಮ್ಮನನ್ನೇ ಕೊಲೆಗೈದ ಅಣ್ಣನ ಕೃತ್ಯ

ತುಮಕೂರು: ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ಪಾಲಿಸಿಯಿಂದ ಸಿಗುವ 30 ಲಕ್ಷ ರೂಪಾಯಿ ಹಣದ ಆಸೆಗೆ  ಅಣ್ಣನೇ ತಮ್ಮನನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆ ಪಟ್ಟನಾಯಕನಹಳ್ಳಿ ಠಾಣೆ ಪೊಲೀಸರು ಕೊಲೆ ರಹಸ್ಯ ಬಯಲಿಗೆಳೆದಿದ್ದಾರೆ. ತಮ್ಮನ ಹೆಸರಲ್ಲಿ ಇರುವ ಎಲ್ಐಸಿ ಪಾಲಿಸಿ ಹಣ ಪಡೆಯುವ ಉದ್ದೇಶದಿಂದ ತಮ್ಮನನ್ನೇ ಕೊಲೆ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 35 ವರ್ಷದ ರಮೇಶ್ ನನ್ನು ಆತನ ಅಣ್ಣ ಹನುಮಂತರಾಜು ಕೊಲೆ ಮಾಡಿ ಅಪಘಾತವೆನ್ನುವಂತೆ ನಾಟಕ ಮಾಡಿರುವುದು ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಮೇಶ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಕಳೆದ ಆರು ವರ್ಷದಿಂದ ಬೆಂಗಳೂರಿನಲ್ಲಿ ಎಳನೀರು ವ್ಯಾಪಾರ, ಮಂಡ್ಯದಲ್ಲಿ ಕಬ್ಬಿನ ಜ್ಯೂಸ್ ವ್ಯಾಪಾರ ಮಾಡಿಕೊಂಡಿದ್ದ. ಪತ್ನಿಯಿಂದ ದೂರವಾಗಿ ಮಾಟ ಮಂತ್ರ ಮಾಡುವ ವೃತ್ತಿಯಲ್ಲಿ ತೊಡಗಿದ್ದ. ತನ್ನ ಸ್ವಂತ ಅಣ್ಣ ತಮ್ಮಂದಿರ ಸಂಸಾರಕ್ಕೆ ಮಾಟ ಮಂತ್ರ ಮಾಡಿ ತೊಂದರೆ ಕೊಡುತ್ತಿದ್ದ ಎಂದು ಹೇಳಲಾಗಿದೆ.

ತಮ್ಮ ರಮೇಶನ ಹೆಸರಿಗೆ 15 ಲಕ್ಷ ರೂ. ಎಲ್ಐಸಿ ಪಾಲಿಸಿ ಮಾಡಿಸಿದ್ದು, ಅದರ ನಾಮಿನಿಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದ ಹನುಮಂತರಾಜು ಪ್ರತಿ ವರ್ಷ ತಮ್ಮನ ಪಾಲಿಸಿಗೆ 85,000 ರೂ. ವಿಮೆ ಕಂತನ್ನು ಪಾವತಿಸುತ್ತಿದ್ದ. ಚಾಲ್ತಿಯಲ್ಲಿ ಇರುವ ವಿಮೆ ಅಪಘಾತದಲ್ಲಿ ಮೃತಪಟ್ಟ ನಾಮಿನಿದಾರರಿಗೆ ವಿಮೆ ಮೊತ್ತ ಡಬಲ್ ಹಣ 30 ಲಕ್ಷ ರೂಪಾಯಿ ಸಿಗುವಂತಿತ್ತು.

ಈ ಹಣದ ದುರಾಸೆಯಿಂದ ಆರೋಪಿ ಹನುಮಂತರಾಜು ತಮ್ಮನನ್ನೇ ಕೊಲೆ ಮಾಡಿಸಿದ್ದಾನೆ. ನವಯುಗ ಟೋಲ್ ಸಮೀಪ ತನ್ನ ಅಂಗಡಿಗೆ ಬರುತ್ತಿದ್ದ ಲಕ್ಷ್ಮಿಕಾಂತ, ನವೀನ ಮತ್ತು ಜಿಲಾನ್ ಅವರೊಂದಿಗೆ ಸೇರಿ ಸಂಚು ರೂಪಿಸಿ ಕೊಲೆ ಮಾಡಿರುವುದು ತನಿಖೆಯ ವೇಳೆ ಗೊತ್ತಾಗಿದೆ.

ಜೂನ್ 19ರಂದು ಯಾವುದೋ ನಿಧಿ ಪೂಜೆ ಇದೆ ಎಂದು ರಮೇಶ್ ನನ್ನು ಶ್ರೀರಾಮಪುರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದು, ದೊಣ್ಣೆಯಿಂದ ಹಲ್ಲೆ ನಡೆಸಿ ಮೈಮೇಲೆ ಕಾರು ಹರಿಸಿದ್ದಾರೆ. ಬ್ಯಾಟರಿಯ ವೈರ್ ಮೂಲಕ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಶವ ಮತ್ತು ಬೈಕ್ ನ್ನು ರಸ್ತೆಯಲ್ಲಿ ಬಿಟ್ಟು ಬೈಕಿನ ಮುಂಭಾಗವನ್ನು ಜಖಂ ಮಾಡಿ ಅಪಘಾತದಲ್ಲಿ ಮೃತಪಟ್ಟಿರುವಂತೆ ಬಿಂಬಿಸಿದ್ದಾರೆ.

ಮೃತನ ಹಿರಿಯ ಸಹೋದರ ರಂಗನಾಥ ನೀಡಿದ ದೂರಿನ ಮೇರೆಗೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ಆರೋಪಿ ಹನುಮಂತರಾಜು ಸೇರಿ ಮೂವರನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular