HomeKarnatakaಸಚಿವ ಜಮೀರ್ ಅಹಮದ್ ಮಹತ್ವದ ಘೋಷಣೆ: ಬಡವರ ಚಿಕಿತ್ಸೆಗೆ ವೇತನ ನೀಡಿ ಮಾದರಿ ಕಾರ್ಯ

ಸಚಿವ ಜಮೀರ್ ಅಹಮದ್ ಮಹತ್ವದ ಘೋಷಣೆ: ಬಡವರ ಚಿಕಿತ್ಸೆಗೆ ವೇತನ ನೀಡಿ ಮಾದರಿ ಕಾರ್ಯ

ಬೆಂಗಳೂರು: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಬಡವರ ಆರೋಗ್ಯ ಚಿಕಿತ್ಸೆಗಾಗಿ ತಮ್ಮ ಮಂತ್ರಿ ಸ್ಥಾನದ ವೇತನವನ್ನು ಮೀಸಲಿಡಲು ತೀರ್ಮಾನಿಸಿದ್ದಾರೆ.

ತಮ್ಮ ಸಚಿವ ಸ್ಥಾನದ ವೇತನದ ಹಣವನ್ನು ಬಡವರು ಮತ್ತು ಅಗತ್ಯವಿರುವವರ ಆರೋಗ್ಯ ವೆಚ್ಚಕ್ಕೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುದ್ದಿ ವಾಹಿನಿಯೊಂದರ ಕ್ಯಾಮೆರಾ ಮ್ಯಾನ್ ಆಗಿರುವ ಬೆಂಗಳೂರಿನ ಜಿಂಕೆ ಪಾರ್ಕ್ ಬೃಂದಾವನ ನಗರ ನಿವಾಸಿ ಬಿ. ರಾಜು ಅವರ ಕಾಲಿನ ಶಸ್ತ್ರ ಚಿಕಿತ್ಸೆಗೆ ಎರಡು ಲಕ್ಷ ರೂಪಾಯಿ ಚೆಕ್ ನೀಡಿದ್ದು. ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ. ತಮ್ಮ ಸಚಿವ ಸ್ಥಾನದ ವೇತನವನ್ನು ಬಡವರ ಚಿಕಿತ್ಸೆಗೆ ಮೀಸಲಿಡುವುದಾಗಿ ಘೋಷಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular