HomeKarnatakaತುಂಗಾರತಿ ಮಹೋತ್ಸವ: ಬಾಗಿನ ಅರ್ಪಿಸಿದ ಜಮೀರ್ ಅಹ್ಮದ್ ಖಾನ್

ತುಂಗಾರತಿ ಮಹೋತ್ಸವ: ಬಾಗಿನ ಅರ್ಪಿಸಿದ ಜಮೀರ್ ಅಹ್ಮದ್ ಖಾನ್

ಕಂಪ್ಲಿ ಉತ್ಸವ-2026ರ ಅಂಗವಾಗಿ ಕಂಪ್ಲಿ ಪಟ್ಟಣದ ಸೋಮಪ್ಪನ ದೇವಾಲಯದ ಮುಂಭಾಗದಲ್ಲಿರುವ ಸೋಮಪ್ಪ ಕೆರೆಯಲ್ಲಿ ತುಂಗಭದ್ರಾ ಆರತಿ ಮಹೋತ್ಸವ ಹಾಗೂ ಬಾಗಿನ ಸಮರ್ಪಣೆಯ ಧಾರ್ಮಿಕ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.

ವಾರಾಣಸಿಯಿಂದ ಆಗಮಿಸಿದ್ದ 10ಕ್ಕೂ ಹೆಚ್ಚು ಅರ್ಚಕರು, ಗಂಗಾರತಿ ಮಾದರಿಯಲ್ಲಿ ತುಂಗಾರತಿಯನ್ನು ವೈಭವದಿಂದ ನಡೆಸಿಕೊಟ್ಟರು. ಧಾರ್ಮಿಕ ವಿಧಿ-ವಿಧಾನದೊಂದಿಗೆ ಸೋಮಪ್ಪ ಕೆರೆಯ ತಟದಲ್ಲಿ ವಿವಿಧ ಪೂಜಾ ಕಾರ್ಯಗಳು ತುಂಗಾರತಿ ಭಾಗವಾಗಿ ನಡೆದವು.

ಬಾಗಿನ ಸಮರ್ಪಣೆ: ತುಂಗಾರತಿಗೂ ಮುನ್ನ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಕಂಪ್ಲಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ ಅಧ್ಯಕ್ಷ ಜೆ.ಎನ್.ಗಣೇಶ್ ಕೆರೆಯ ತೀರದಲ್ಲಿ ಬಾಗಿನ ಸಮರ್ಪಣೆ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಂಪಿ ಉತ್ಸವ ಪ್ರತಿ ಬಾರಿ ನಡೆಯುತ್ತಿದೆ. ಆದರೆ 2ನೇ ಬಾರಿಗೆ ಕಂಪ್ಲಿ ಉತ್ಸವವನ್ನು ನಡೆಸಲಾಗುತ್ತಿದೆ. ಬುಧವಾರ ಉತ್ಸವಕ್ಕೆ ಚಾಲನೆ ಸಿಕ್ಕಿದ್ದು, ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಕಂಪ್ಲಿ ಉತ್ಸವದ ಅಂಗವಾಗಿ ವಾರಾಣಸಿಯ ಅರ್ಚಕರಿಂದ ತುಂಗಾರತಿ ಆಯೋಜಿಸಲಾಗಿತ್ತು. ಸೋಮಪ್ಪ ಕೆರೆಯ ಸುತ್ತಲೂ ನಿರ್ಮಿಸಿದ್ದ 18 ವೇದಿಕೆಗಳಲ್ಲಿ ಭರತನಾಟ್ಯ ಕಲಾವಿದರ ಹೆಜ್ಜೆಯ ನಾದದ ಜೊತೆಗೆ ತುಂಗಾರತಿ ಕಾರ್ಯಕ್ರಮ ನೋಡುಗರನ್ನು ರೋಮಾಂಚನಗೊಳಿಸಿತು.

ಸೋಮಪ್ಪನ ಕೆರೆಯಲ್ಲಿ ತುಂಗಾರತಿ ಭಾಗವಾಗಿ ತೇಲುವ ಚಿತ್ತಾರದ ದೀಪಗಳನ್ನು ಬೆಳಗಿಸಲಾಯಿತು. ಸಾರ್ವಜನಿಕರು ಸಂಭ್ರಮ, ಸಡಗರದಿಂದ ಬೆಳಕಿನ ಚಿತ್ತಾಕರ್ಷದ ನಡುವೆ ತುಂಗಾರತಿಯನ್ನು ಬೆರಗಿನಿಂದ ಕಣ್ತುಂಬಿಕೊಂಡರು.

ಐತಿಹಾಸಿಕ ಸೋಮಪ್ಪ ಕೆರೆ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಭರತ ನಾಟ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಬಳಿಕ ವಿವಿಧ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಸಾಧಕರಿಗೆ, ಹೋರಾಟಗಾರರಿಗೆ ಸನ್ಮಾನ ಮಾಡಲಾಯಿತು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular