HomeKarnatakaBIG NEWS: ಯುವನಿಧಿ ಯೋಜನೆಗೆ ಅಂತರ್ಜಾಲದಿಂದ ಯುವಕನ ಫೋಟೋ ಕದ್ದು ಪ್ರಚಾರ; ಸಿಎಂ ಸಿದ್ದರಾಮಯ್ಯ ವಿರುದ್ಧ...

BIG NEWS: ಯುವನಿಧಿ ಯೋಜನೆಗೆ ಅಂತರ್ಜಾಲದಿಂದ ಯುವಕನ ಫೋಟೋ ಕದ್ದು ಪ್ರಚಾರ; ಸಿಎಂ ಸಿದ್ದರಾಮಯ್ಯ ವಿರುದ್ಧ ಯತ್ನಾಳ್ ಆಕ್ರೋಶ

ಬೆಂಗಳೂರು: ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆ ‘ಯುವನಿಧಿ’ ಜಾರಿ ಜಾಹೀರಾತಿಗಾಗಿ ಅಂತರ್ಜಾಲದಲ್ಲಿರುವ ಯುವಕನ ಫೋಟೋ ಕದ್ದು ಕಳ್ಳಾಟವಾಡುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಪ್ರಚಾರದ ಗೀಳಿಗೆ ಬಿದ್ದಿರುವ ಸಿದ್ದರಾಮಯ್ಯ ಅವರ ತಂಡ ಅಂತರ್ಜಾಲದಿಂದ ಯಾವುದೋ ಯುವಕನ ಫೋಟೋ ಕದ್ದು, ಈತ ಯುವನಿಧಿಯ ಫಲಾನುಭವಿ ಅಂತ ತೋರಿಸುತ್ತಿರುವುದು ಇವರ ಕಳ್ಳಾಟಕ್ಕೆ ಹಿಡಿದ ಕೈಗನ್ನಡಿ ಎಂದು ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಜನವರಿಯಲ್ಲಿ 5ನೇ ಗ್ಯಾರಂಟಿ ಯುವನಿಧಿ ಯೋಜನೆ ಜಾರಿಗೆ ಸಿದ್ಧತೆ ನಡೆಸಿದೆ. ಯೋಜನೆ ಪ್ರಚಾರಕ್ಕಾಗಿ ಬಳಸಿರುವ ಯುವಕನ ಫೋಟೋ ಅಂತರ್ಜಾಲದಿಂದ ಕದ್ದಿರುವುದು ಎಂದು ಶಾಸಕ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular