ಯೂಟ್ಯೂಬ್ ಗಾಗಿ ಬೈಕ್ ಸ್ಟಂಟ್; ಖಾಕಿಗೆ ತಗ್ಲಾಕ್ಕೊಂಡ ಬಳಿಕ ಕೈಮುಗಿದು ಕ್ಷಮೆ ಕೇಳಿದ ಯುವಕ

ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುವ ಕ್ರೇಜ್‌ ನಲ್ಲಿ ಬೈಕ್ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆಯಲ್ಲಿ ಸಾಹಸ ಪ್ರದರ್ಶಿಸುತ್ತಾರೆ.

ಸ್ಟಂಟ್‌ ಗಳು ರಸ್ತೆಯಲ್ಲಿ ಸವಾರರು ಮತ್ತು ಇತರ ಪ್ರಯಾಣಿಕರಿಗೆ ಅಪಾಯವನ್ನುಂಟು ಮಾಡುತ್ತವೆ. ಡೆಹ್ರಾಡೂನ್ ವ್ಲಾಗರ್ ಒಬ್ಬ ಮಾಡಿದ ಇದೇ ರೀತಿಯ ಬೈಕ್ ಸ್ಟಂಟ್ ಅವನನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡಿದ್ದ ಯುವಕನ ಬೈಕ್ ವಶಪಡಿಸಿಕೊಂಡು ಆತನ ವಿರುದ್ಧ ಡೆಹ್ರಾಡೂನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಉತ್ತರಾಖಂಡ್ ಪೊಲೀಸರು ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ. ಅದರಲ್ಲಿ ಯೂಟ್ಯೂಬರ್ ತನ್ನ ಕೃತ್ಯಗಳಿಗೆ ಕೈ ಜೋಡಿಸಿ ಕ್ಷಮೆಯಾಚಿಸುತ್ತಿರುವುದನ್ನು ಕಾಣಬಹುದು.

ವಿಡಿಯೋ ಆರಂಭದಲ್ಲಿ ಯುವಕನು ಕ್ಯಾಮೆರಾದೊಂದಿಗೆ ಸಾಕಷ್ಟು ಶಕ್ತಿಯುತವಾಗಿ ಮಾತನಾಡುವುದನ್ನು ತೋರಿಸುತ್ತದೆ. ನಂತರ ಬೈಕ್ ನಲ್ಲಿ ವೇಗವಾಗಿ ರಸ್ತೆಗಿಳಿದು ಸಾಹಸ ಪ್ರದರ್ಶಿಸುತ್ತಾನೆ. ಆದರೆ ನಂತರ ಪೊಲೀಸರು ಆತನನ್ನು ಹಿಂಬಾಲಿಸಿದ್ದರಿಂದ ಆತ ಗಾಬರಿಗೊಂಡಿದ್ದಾನೆ.

ಕೊನೆಯಲ್ಲಿ ತಪ್ಪನ್ನು ಒಪ್ಪಿಕೊಂಡ ಯುವಕ ಕ್ಷಮೆಯಾಚಿಸುತ್ತಾನೆ. ಯುವಕನನ್ನು ಆಗಸ್ತ್ಯ ಚೌಹಾಣ್ ಎಂದು ಗುರುತಿಸಲಾಗಿದೆ.

ಈ ಕ್ಲಿಪ್ ಅನ್ನು ಹಂಚಿಕೊಂಡಿರೋ ಪೊಲೀಸ್ ಇಲಾಖೆ ಯೂಟ್ಯೂಬರ್‌ನ ಬೈಕ್ ಅನ್ನು ವಶಪಡಿಸಿಕೊಂಡ ನಂತರ ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ವೀಡಿಯೊ ಆನ್‌ಲೈನ್‌ನಲ್ಲಿ ನಗು ತರಿಸಿದ್ದು ಹಲವರು ಪೊಲೀಸ್ ಕ್ರಮವನ್ನ ಶ್ಲಾಘಿಸಿದ್ದಾರೆ.

https://twitter.com/uttarakhandcops/status/1640327535752871937?ref_src=twsrc%5Etfw%7Ctwcamp%5Etweetembed%7Ctwterm%5E1640327535752871937%7Ctwgr%5Ecdefc9df36cf0df5f4d75d86508445c9d234488f%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fyoutubers-bike-stunt-lands-him-in-trouble-cops-seize-bike-8523394%2F%3Futm_source%3Dmsnutm_medium%3DReferral

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read