ಹುಬ್ಬಳ್ಳಿ: ನಕಲಿ ದಾಖಲೆ ಸೃಷ್ಟಿಸಿ ಹಿಂದೂ ಯುವತಿಯನ್ನು ವಿವಾಹವಾಗಿರುವ ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಯುವತಿಯ ಪೋಷಕರು ನೀಡಿದ ದೂರಿನ ಮೇರೆಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಮುಕಳೆಪ್ಪ್ಪ ವಿರುದ್ಧ ಜೀವಬೆದರಿಕೆ ಹಾಗೂ ಅಪಹರಣ ಪ್ರಕರಣ ದಾಖಲಿಸಿದ್ದಾರೆ.
ರೀಲ್ಸ್ ಮಾಡುವ ನೆಪದಲ್ಲಿ ಮುಕಳೆಪ್ಪ ಮದುವೆ ವೇದಿಕೆ ಸಿದ್ಧಪಡಿಸಿದ್ದ. ನಾಲ್ಕು ತಿಂಗಳ ಹಿಂದೆ ತಮ್ಮ ಮಗಳನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಆಗ ಅದು ರೀಲ್ಸ್ ಮದುವೆ ಎಂದವನು ಈಗ ನಿಜವಾಗಿಯೂ ಮದುವೆಯಾಗಿದ್ದೇನೆ ಎನ್ನುತ್ತಿದ್ದಾನೆ. ಇದು ಸುಳ್ಳು ಮದುವೆ ನಮ್ಮ ಮಗಳನ್ನು ಕಳುಹಿಸಿಕೊಡು ಎಂದಿದ್ದಕ್ಕೆ ಮುಕಳೆಪ್ಪ ನಮಗೆ ಧಮ್ಕಿ ಹಾಕಿದ್ದಾನೆ. ಮುಕಳೆಪ್ಪನನ್ನು ಬಂಧಿಸಿ ತಮ್ಮ ಮಗಳನ್ನು ವಾಪಸ್ ಕಳಿಸಿಕೊಡುವಂತೆ ಯುವತಿ ಪೋಷಕರು ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಕಳೆಪ್ಪ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಜೀವ ಬೆದರಿಕೆ ಹಾಗೂ ಅಪಹರಣ ಪ್ರಕರಣ ಕೂಡ ದಾಖಲಾಗಿದೆ.