ಹೋಟೆಲ್​ ಪರಿಚಾರಿಕೆಗೆ ಟಿಪ್ಸ್​ ರೂಪದಲ್ಲಿ ಕಾರು ಕೊಟ್ಟ ಯುಟ್ಯೂಬರ್……​!

ನೀವು ಹೋಟೆಲ್​ಗೆ ಹೋದಾಗ ಅಬ್ಬಬ್ಬಾ ಎಂದರೆ 100-200 ರೂ. ಟಿಪ್ಸ್​ ಕೊಡಬಹುದು. ಇದು ಬಹು ದೊಡ್ಡ ಮೊತ್ತ ಎನಿಸಿಕೊಳ್ಳುತ್ತದೆ. ಆದರೆ ಯೂಟ್ಯೂಬರ್​ ಒಬ್ಬ ಟಿಪ್ಸ್​ ರೂಪದಲ್ಲಿ ಪರಿಚಾರಿಕೆ ಒಬ್ಬಳಿಗೆ ಕಾರನ್ನು ನೀಡಿದ್ದಾನೆ!

ಯೂಟ್ಯೂಬರ್​ ಮಿಸ್ಟರ್ ಬೀಸ್ಟ್​ ಎಂಬಾತ ಇದನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಇದೀಗ ವೈರಲ್​ ಆಗಿದೆ. ಅವರು ತಮ್ಮ ವ್ಯಾಪಾರದ ಉದ್ಯಮಗಳನ್ನು ಉತ್ತೇಜಿಸುವ ಲೋಗೋಗಳೊಂದಿಗೆ ಹೊಚ್ಚ ಹೊಸ ಕಾರ್ ಒಂದನ್ನು ರೆಸ್ಟೋರೆಂಟ್‌ನ ಪರಿಚಾರಿಕೆಗೆ ಟಿಪ್ಸ್​ ರೂಪದಲ್ಲಿ ಉಡುಗೊರೆಯಾಗಿ ನೀಡುವುದಾಗಿ ಹೇಳಿಕೊಂಡಿರುವ ವಿಡಿಯೋ ಇದಾಗಿದೆ.

139 ಮಿಲಿಯನ್ ಚಂದಾದಾರರೊಂದಿಗೆ, ಮಿಸ್ಟರ್ ಬೀಸ್ಟ್ ಅತಿ ದೊಡ್ಡ ಯೂಟ್ಯೂಬ್​ ಚಾನೆಲ್​ ಹೊಂದಿದ್ದಾರೆ. ಅವರ ನಿಜವಾದ ಹೆಸರು ಜಿಮ್ಮಿ ಡೊನಾಲ್ಡ್ಸನ್, ವಿಶ್ವದಲ್ಲೇ ಹೆಚ್ಚು ಅನುಸರಿಸುವ ಯೂಟ್ಯೂಬರ್ ಎಂಬ ಹೆಗ್ಗಳಿಕೆ ಇವರದ್ದು. ಕೆಲ ದಿನಗಳ ಹಿಂದೆ ಅಪ್‌ಲೋಡ್ ಮಾಡಲಾದ 42 ಸೆಕೆಂಡ್‌ಗಳ ವೀಡಿಯೊದಲ್ಲಿ ಆಮಿ ಎಂಬ ಪರಿಚಾರಿಕೆಗೆ ಕಾರನ್ನು ನೀಡುವುದನ್ನು ನೋಡಬಹುದು. ಆಕೆ ಸಂತಸದಿಂದ ಕುಣಿದಾಡಿದಳು ಎಂದು ಬೇರೆ ಹೇಳಬೇಕಾಗಿಲ್ಲ. ನೀನು ಇಲ್ಲಿಯವರೆಗೆ ಪಡೆದ ಅತಿ ಹೆಚ್ಚು ಟಿಪ್ಸ್​ ಯಾವುದು ಎಂದು ಆಕೆಗೆ ಕೇಳಿದಾಗ 50 ಡಾಲರ್​ ಎನ್ನುತ್ತಾಳೆ. ನಾನು ನಿಮಗೆ ಕಾರನ್ನು ನೀಡುತ್ತೇನೆ ಎಂದು ಯುಟ್ಯೂಬರ್​ ಅದರ ಕೀಯನ್ನು ನೀಡಿ ಕಾರಿನತ್ತ ಕೊಂಡೊಯ್ಯುವುದನ್ನು ನೋಡಬಹುದು.

https://youtu.be/Zksaj7_R5vg

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read