BREAKING: SIT ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಯೂಟ್ಯೂಬರ್ ಅಭಿಷೇಕ್

ಮಂಗಳೂರು: ಯೂಟ್ಯೂಬ್ ನಲ್ಲಿ ಸುಳ್ಳು ಮಾಹಿತಿ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಅಭಿಷೇಕ್ ನನ್ನು ಎಸ್ ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದು, ಈ ವೇಳೆ ಲೈಕ್ಸ್ ಹಾಗೂ ವೀಕ್ಷಣೆಗಾಗಿ ವಿಡಿಯೋ ಮಾಡಿ ಅಪ್ ಲೋಡ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಅಭಿಷೇಕ್, ಗಿರೀಶ್ ಮಟ್ಟಣ್ಣವರ್ ಸಂದರ್ಶನ ಹಾಗೂ ಸುಳ್ಳು ಮಾಹಿತಿಗಳನ್ನು ಪ್ರಸಾರ ಮಾಡಿದ್ದರು. 6 ತಿಂಗಳ ಹಿಂದೆ ಗಿರೀಶ್ ಮಟ್ಟಣ್ಣವರ್ ಸಂಪರ್ಕಿಸಿದ್ದ ಅಭಿಷೇಕ್ ಸುಳ್ಳು ಮಾಹಿತಿ ಪ್ರಸಾರ ಮಾಡಿದ್ದರು. ಅಲ್ಲದೇ ಪ್ರಕರಣ ದಾಖಲಾಗುವ ಮುನ್ನವೇ ವಿಡಿಯೋ ಮಾಡಿದ್ದರು.

ಸುಜಾತಾ ಭಟ್ ಭೇಟಿ, ಅನನ್ಯಾ ಭಟ್ ಕಾಲ್ಪನಿಕ ಕಥೆ ಬಗ್ಗೆ ಹಾಗೂ ಬಂಗ್ಲಗುಡ್ಡಕ್ಕೆ ಭೇಟಿ ನೀಡಿ ಜಯಂತ್ ಹಾಗೂ ಅಭಿಷೇಕ್ ವಿಡಿಯೋ ಮಾಡಿದ್ದರು. ಈ ಬಗ್ಗೆಯೂ ಎಸ್ ಐಟಿ ಅಧಿಕಾರಿಗಳು ಅಭಿಷೇಕ್ ನನ್ನು ತೀವ್ರ ವಿಚಾರಣೆ ನಡೆಸಿದ್ದು, ಲೈಕ್ಸ್ ಹಾಗೂ ಹೆಚ್ಚಿವ ವೀವ್ಸ್ ಗಾಗಿ ತಾನು ಸುಳ್ಳು ಮಾಹಿತಿ ಪ್ರಸಾರ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ, ಅಲ್ಲದೇ ತನ್ನಿಂದ ತಪ್ಪಾಗಿದೆ ಎಂದು ವಿಚಾರಣೆ ವೇಳೆ ಕಣ್ಣೀರಿಟ್ಟಿದ್ದಾರೆ.

ಪ್ರಕರಣ ಸಂಬಂಧ ಮತ್ತಷ್ಟು ಯೂಟ್ಯೂಬರ್ ಗಳಿಗೂ ಎಸ್ ಐಟಿ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read