HomeEntertainmentಯೂಟ್ಯೂಬ್‌ನಲ್ಲಿ ಸೌಂಡ್ ಮಾಡ್ತಿದೆ 'ಸಾಲಗಾರರ ಸಹಕಾರ ಸಂಘ' ಚಿತ್ರದ ಕಾಸು ದುಡ್ಡು ಸಾಂಗ್: ಹರಿಕೃಷ್ಣ ಧ್ವನಿಗೆ...

ಯೂಟ್ಯೂಬ್‌ನಲ್ಲಿ ಸೌಂಡ್ ಮಾಡ್ತಿದೆ ‘ಸಾಲಗಾರರ ಸಹಕಾರ ಸಂಘ’ ಚಿತ್ರದ ಕಾಸು ದುಡ್ಡು ಸಾಂಗ್: ಹರಿಕೃಷ್ಣ ಧ್ವನಿಗೆ ಪ್ರೇಕ್ಷಕರು ಫಿದಾ!

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಶೀರ್ಷಿಕೆಯ ಮೂಲಕವೇ ಚಿತ್ರಪ್ರೇಮಿಗಳ ಗಮನ ಸೆಳೆದಿರುವ ಸಾಲಗಾರರ ಸಹಕಾರ ಸಂಘ ಸಿನಿಮಾದ ಹೊಸ ಹಾಡೊಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಚಿತ್ರದ ಕಾಸು ದುಡ್ಡು ಎಂಬ ಸಾಹಿತ್ಯವಿರುವ ಈ ಹಾಡು ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಶ್ರೋತೃಗಳ ಮುಂದೆ ಬಂದಿದ್ದು, ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.

ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ವಿ ಹರಿಕೃಷ್ಣ ಅವರ ಗಂಭೀರ ಮತ್ತು ಮಾಗಿದ ಧ್ವನಿಯಲ್ಲಿ ಈ ಹಾಡು ಮೂಡಿಬಂದಿರುವುದು ವಿಶೇಷ. ಎಂ ಎಸ್ ತ್ಯಾಗರಾಜ ಅವರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಬಿ ಆರ್ ನವೀನ್ ಕುಮಾರ್ ಸೌಂಡ್ ಮಿಕ್ಸಿಂಗ್ ನಿರ್ವಹಿಸಿದ್ದರೆ, ಭರತ್ ರಾಮ್ ಲಿರಿಕಲ್ ವೀಡಿಯೋ ವಿನ್ಯಾಸ ಮಾಡಿದ್ದಾರೆ. ಹಣ ಮತ್ತು ಜೀವನದ ವಾಸ್ತವತೆಯನ್ನು ಸಾರುವ ಈ ಗೀತೆ ಪ್ರೇಕ್ಷಕರಿಗೆ ತಕ್ಷಣವೇ ಇಷ್ಟವಾಗುವಂತಿದೆ.

ವಿಕ್ರಮ್ ಧನಂಜಯ್ ಆರ್ ನಿರ್ದೇಶನದ ಈ ಚಿತ್ರದಲ್ಲಿ ಲೋಕೇಶ್ ಬಸ್ಕೋ, ಕೆಂಪೇಗೌಡ, ಪ್ರವೀಣ್ ಕುಮಾರ್ ಗಸ್ತಿ, ಜಾಲಿ ಜ್ಯಾಕ್ ಮತ್ತು ಪೂಜಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎಸ್ ಎನ್ ಎಲ್ ಎನ್ ಎಸ್ ಎಂಟರ್‌ಟೈನರ್ಸ್ ಹಾಗೂ ಹವೀಶ್ ಸಿನೆ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕುಮರೇಶ್ ಎ ಮತ್ತು ಸುನಿಲ್ ಕುಮಾರ್ ಪಟ್ಟಣಗೆರೆ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ರಾಜಣ್ಣ ಪುಟ್ಟೇನಹಳ್ಳಿ, ವಿಕ್ರಮ್ ಧನಂಜಯ್ ಹಾಗೂ ಚಂದ್ರು ಶಿರಳಕೊಪ್ಪ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನಿರುದ್ಧ ಅವರ ಛಾಯಾಗ್ರಹಣ ಹಾಗೂ ಗಣೇಶ್ ನಿರ್ಚಲ್ ಮತ್ತು ಶೇಷಾಚಲ ಕುಲಕರ್ಣಿ ಅವರ ಸಂಕಲನ ಈ ಚಿತ್ರಕ್ಕಿದ್ದು, ರುಕ್ಮಾಂಗದನ್ ಡಿಟಿಎಸ್ ಕೆಲಸ ನಿರ್ವಹಿಸಿದ್ದಾರೆ. ಭರತ್ ರಾಮ್ ಅವರ ಪೋಸ್ಟರ್ ವಿನ್ಯಾಸ ಮತ್ತು ಚಂದ್ರಶೇಖರ್ ಅವರ ಮಾಧ್ಯಮ ಪ್ರಚಾರ ನಿರ್ವಹಣೆ ಚಿತ್ರಕ್ಕಿದೆ. ಬಿಡುಗಡೆಯಾಗಿರುವ ಕಾಸು ದುಡ್ಡು ಹಾಡು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular