ನಮ್ಮ ಕೈಗಳು ಕೇವಲ ಕೆಲಸ ಮಾಡಲು ಮಾತ್ರವಲ್ಲ, ನಮ್ಮ ವ್ಯಕ್ತಿತ್ವದ ಕನ್ನಡಿಯೂ ಹೌದು ಎಂದು ನಿಮಗೆ ತಿಳಿದಿದೆಯೇ? ಹೌದು, ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ನಿಮ್ಮ ಕೈ ಬೆರಳುಗಳ ಉದ್ದ, ಅವುಗಳ ಆಕಾರ ಮತ್ತು ಅವುಗಳ ನಡುವಿನ ಅಂತರವು ನಿಮ್ಮ ಗುಣಲಕ್ಷಣಗಳು, ವೃತ್ತಿಜೀವನ ಮತ್ತು ಭವಿಷ್ಯದ ಬಗ್ಗೆ ಹತ್ತಾರು ಆಸಕ್ತಿದಾಯಕ ಸಂಗತಿಗಳನ್ನು ಬಿಚ್ಚಿಡುತ್ತವೆ.
ನಿಮ್ಮ ತೋರುಬೆರಳು ಉಂಗುರದ ಬೆರಳಿಂತ ಉದ್ದವಿದೆಯೇ? ಅಥವಾ ಕಿರುಬೆರಳು ವಕ್ರವಾಗಿದೆಯೇ? ಈ ಪ್ರತಿಯೊಂದು ಸಣ್ಣ ಬದಲಾವಣೆಯೂ ನಿಮ್ಮ ಅದೃಷ್ಟದ ಬಗ್ಗೆ ದೊಡ್ಡ ಸೂಚನೆಗಳನ್ನು ನೀಡುತ್ತದೆ. ಬನ್ನಿ, ನಿಮ್ಮ ಬೆರಳುಗಳು ನಿಮ್ಮ ಬಗ್ಗೆ ಏನು ಹೇಳುತ್ತವೆ ಎಂಬ ರೋಚಕ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ!
ತೋರು ಬೆರಳು ಮತ್ತು ಗುರು ಗ್ರಹ: ತೋರು ಬೆರಳು ಗುರು ಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಇದನ್ನು ‘ಅದೃಷ್ಟದ ಬೆರಳು’ ಎಂದೂ ಕರೆಯುತ್ತಾರೆ. ಅದಕ್ಕಾಗಿಯೇ ಹಿರಿಯರು ಯಾರನ್ನೂ ಬೆರಳು ಮಾಡಿ ತೋರಿಸಬೇಡಿ ಅಥವಾ ಬೆರಳು ತೋರಿಸುತ್ತಾ ಮಾತನಾಡಬೇಡಿ ಎಂದು ಹೇಳುತ್ತಾರೆ. ಈ ಬೆರಳಿನ ಆಕಾರ, ಉದ್ದ ಮತ್ತು ಅಗಲವನ್ನು ಆಧರಿಸಿ ವ್ಯಕ್ತಿಯ ಗುಣಲಕ್ಷಣ ಹಾಗೂ ಭವಿಷ್ಯವನ್ನು ತಿಳಿಯಬಹುದು.
ಉದ್ದವಾದ ತೋರು ಬೆರಳು: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಯಾರ ತೋರು ಬೆರಳು ಇತರ ಬೆರಳುಗಳಿಗಿಂತ ಉದ್ದವಾಗಿರುತ್ತದೆಯೋ ಅವರು ತುಂಬಾ ಅದೃಷ್ಟವಂತರು. ಇವರು ಪ್ರತಿಯೊಂದು ಕ್ಷೇತ್ರದಲ್ಲೂ ಜಯ ಸಾಧಿಸುತ್ತಾರೆ. ವಿಶೇಷವಾಗಿ ಇವರಲ್ಲಿ ರಾಜಕೀಯ ಲಕ್ಷಣಗಳು ಹೆಚ್ಚಿರುತ್ತವೆ ಮತ್ತು ರಾಜಕೀಯವಾಗಿ ಉನ್ನತ ಸ್ಥಾನಕ್ಕೇರುತ್ತಾರೆ.
ಅಗಲವಾದ ತೋರು ಬೆರಳು: ತೋರು ಬೆರಳು ಅಗಲವಾಗಿದ್ದರೆ, ಅಂತಹವರು ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಪಡೆಯುತ್ತಾರೆ. ಇವರು ದೂರದೃಷ್ಟಿ ಹೊಂದಿರುವವರು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಒಂದಕ್ಕೆ ಎರಡು ಬಾರಿ ಯೋಚಿಸುತ್ತಾರೆ. ಬುದ್ಧಿವಂತಿಕೆಯಿಂದ ಕೆಲಸ ಮಾಡುತ್ತಾರೆ ಮತ್ತು ಇವರಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ.
ಚಿಕ್ಕದಾದ ಅಥವಾ ಉಬ್ಬಿದ ಬೆರಳು: ನಿಮ್ಮ ತೋರು ಬೆರಳು ಚಿಕ್ಕದಾಗಿದ್ದು ಉಬ್ಬಿದಂತಿದ್ದರೆ, ಅಂತಹವರು ಜೀವನದ ಬಗ್ಗೆ ಸ್ವಲ್ಪ ನಕಾರಾತ್ಮಕ ಭಾವನೆ ಹೊಂದಿರುತ್ತಾರೆ. ಸದಾ ಯಾವುದೋ ವಿಷಯದಲ್ಲಿ ಚಿಂತಿತರಾಗಿರುತ್ತಾರೆ. ಕೆಲವು ಬಾರಿ ತಮ್ಮ ಸಾಮರ್ಥ್ಯವನ್ನೇ ಮರೆತು ಅವಕಾಶಗಳನ್ನು ಕೈಬಿಡುತ್ತಾರೆ. ಆದರೆ ಸಮಾಜದಲ್ಲಿ ಇವರಿಗೆ ಉತ್ತಮ ಗೌರವ ಮರ್ಯಾದೆ ಸಿಗುತ್ತದೆ.
ದಪ್ಪನೆಯ ಬೆರಳು ಮತ್ತು ಅಗಲವಾದ ಉಗುರು: ಯಾರ ತೋರು ಬೆರಳು ದಪ್ಪವಾಗಿದ್ದು, ಉಗುರು ಅಗಲವಾಗಿರುತ್ತದೆಯೋ ಅವರು ತುಂಬಾ ಒಳ್ಳೆಯವರು. ಇವರು ಸೌಮ್ಯ ಸ್ವಭಾವದವರಾಗಿದ್ದು, ಸಮಾಜ ಸೇವೆ ಮಾಡುವುದರಲ್ಲಿ ಮುಂದಿರುತ್ತಾರೆ. ತಮ್ಮ ಹಿತಕ್ಕಿಂತ ಇತರರ ಹಿತದ ಬಗ್ಗೆ ಹೆಚ್ಚು ಯೋಚಿಸುವ ಸ್ವಭಾವ ಇವರದ್ದಾಗಿರುತ್ತದೆ.

