ಸಂಖ್ಯಾಶಾಸ್ತ್ರದ ಪ್ರಕಾರ ಆರೋಗ್ಯ ಸಮಸ್ಯೆ ಬಗ್ಗೆ ಮಾಹಿತಿ ನೀಡುತ್ತೆ ನಿಮ್ಮ ‘ಜನ್ಮ ದಿನಾಂಕ’…..!

ಸಂಖ್ಯಾಶಾಸ್ತ್ರವು ಕೂಡ ಜ್ಯೋತಿಷ್ಯಶಾಸ್ತ್ರದ ಒಂದು ಭಾಗವಾಗಿದ್ದು ನಿಮ್ಮ ಭವಿಷ್ಯದಲ್ಲಿ ಸಂಭವಿಸಬಹುದಾದ ಘಟನೆಗಳ ಬಗ್ಗೆ ಸೂಚನೆಗಳನ್ನು ನೀಡುತ್ತದೆ. ನಿಮ್ಮ ಜನ್ಮ ದಿನಾಂಕವನ್ನು ಆಧರಿಸಿ ಸಂಖ್ಯಾಶಾಸ್ತ್ರವು ನಿಮ್ಮ ಆರೋಗ್ಯ ಹೇಗಿರುತ್ತೆ ಅನ್ನೋದನ್ನು ತಿಳಿಸುತ್ತೆ.

ಸಂಖ್ಯೆ 1 : 1, 10, 19 ಹಾಗೂ 28ರ ದಿನಾಂಕದಂದು ಜನಿಸಿದವರನ್ನು ಸೂರ್ಯ ಆಳುತ್ತಾನೆ. ಹೀಗಾಗಿ ಈ ದಿನಾಂಕದಂದು ಜನಿಸಿದವರು ಉತ್ತಮ ಆರೋಗ್ಯವನ್ನು ಪಡೆದಿರುತ್ತಾರೆ ಎಂಬ ನಂಬಿಕೆ ಇದೆ. ಸೂರ್ಯನು ದೇಹದಲ್ಲಿ ಹೃದಯ, ರಕ್ತನಾಳ, ತಲೆ, ಲಿವರ್​ ಹಾಗೂ ಹೊಟ್ಟೆಯನ್ನು ಆಳುತ್ತಾನೆ. ಹೀಗಾಗಿ ಈ ದಿನಾಂಕದಂದು ಜನಿಸಿದವರು ಸಾಮಾನ್ಯವಾಗಿ ಹೃದಯ ಸಂಬಂಧಿ ಹಾಗೂ ರಕ್ತ ಸಂಬಂಧಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ.

ಸಂಖ್ಯೆ 1ರ ಅಡಿಯಲ್ಲಿ ಜನಿಸಿದ ಜನರು ಚೈತನ್ಯಶೀಲರಾಗಿದ್ದಾರೆ. ಹೀಗಾಗಿ ಇವರಿಗೆ ಕೆಲಸದಲ್ಲಿ ಒತ್ತಡ ಎಂಬ ಭಾವನೆ ಎನಿಸೋದಿಲ್ಲ. ಈ ಸಂಖ್ಯೆಯಲ್ಲಿ ಜನಿಸಿದರು ಹೆಚ್ಚಾಗಿ ಎಣ್ಣೆಯಲ್ಲಿ ಕರಿದ ಆಹಾರ ಸೇವನೆ ತಪ್ಪಿಸಬೇಕು. ಜೊತೆಯಲ್ಲಿ ಕಿತ್ತಳೆ, ಸೇಬು, ಶುಂಠಿ, ಬಾರ್ಲಿ ಹಾಗೂ ಡ್ರೈಫ್ರೂಟ್ಸ್ ಸೇವನೆ ಹೆಚ್ಚಿಸಬೇಕು. ಅಕ್ಟೋಬರ್​, ಡಿಸೆಂಬರ್​ ಹಾಗೂ ಜನವರಿ ಇವರಿಗೆ ಅಷ್ಟೊಂದು ಯೋಗ್ಯವಾದ ತಿಂಗಳಲ್ಲ.

ಸಂಖ್ಯೆ 2 : 2, 11, 20, ಹಾಗೂ 29ರಂದು ಜನಿಸಿದವರನ್ನು ಚಂದ್ರ ಆಳುತ್ತಾನೆ. ಇವರು ಅಷ್ಟೊಂದು ಸದೃಢ ಮನೋಭಾವದ ವ್ಯಕ್ತಿಗಳಲ್ಲ. ಹೀಗಾಗಿ ಇವರಿಗೆ ಉದರ ಸಂಬಂಧಿ ಅಥವಾ ಜೀರ್ಣಕ್ರಿಯೆ ಸಂಬಂಧಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಇದು ಮಾತ್ರವಲ್ಲದೇ ರಕ್ತ ಹೀನತೆ ಸಂಬಂಧಿ ಅಂದರೆ ಅನೀಮಿಯಾ, ಒತ್ತಡ, ನಿದ್ರಾಹೀನತೆಯಂತಹ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಇವರು ಮಾನಸಿಕವಾಗಿ ಅಷ್ಟೊಂದು ಸಮರ್ಥರಲ್ಲ. ಇವರು ದೇಹಕ್ಕೆ ಮಸಾಜ್​​​ ಮಾಡಿಕೊಳ್ಳಬೇಕು ಹಾಗೂ ಕಾಳು ಮೆಣಸನ್ನು ಜೇನುತುಪ್ಪಕ್ಕೆ ಮಿಶ್ರಣ ಮಾಡಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಜನವರಿ, ಫೆಬ್ರವರಿ ಹಾಗೂ ಜುಲೈ ತಿಂಗಳು ಈ ದಿನಾಂಕದಂದು ಜನಿಸಿದವರಿಗೆ ಶುಭಕರವಲ್ಲ.

ಸಂಖ್ಯೆ 3: 3, 12,  21 ಹಾಗೂ 30ರಂದು ಜನಿಸಿದವರನ್ನು ಗುರು ಗ್ರಹ ಆಳುತ್ತದೆ. ಗುರು ಗ್ರಹವು ಯಕೃತ್ತು, ಶ್ವಾಸಕೋಶ ಹಾಗೂ ಅಭಿದಮನಿಯನ್ನು ಆಳುತ್ತದೆ. ಈ ದಿನಾಂಕದಲ್ಲಿ ಜನಿಸಿದವರು ಹೆಚ್ಚಾಗಿ ಶ್ವಾಸಕೋಶ ಸಮಸ್ಯೆ, ಚರ್ಮ ಸಂಬಂಧಿ ಕಾಯಿಲೆ, ಮಧುಮೇಹ, ಗಂಟಲು ನೋವು ಹಾಗೂ ಸಂಧಿವಾತ ಸಮಸ್ಯೆಯಿಂದ ಬಳಲಲಿದ್ದಾರೆ. ಸೇಬು ಹಣ್ಣು, ದಾಳಿಂಬೆ, ದ್ರಾಕ್ಷಿ , ಅನಾನಸ್​​, ಚೆರ್ರಿ, ಬಾದಾಮಿ ಹಾಗೂ ಲವಂಗ ಸೇವನೆ ಒಳ್ಳೆಯದು.

ಸಂಖ್ಯೆ 4: 4, 13, 22 ಹಾಗೂ 31ರಂದು ಜನಿಸಿದವರನ್ನು ರಾಹು ಆಳುತ್ತಾನೆ. ರಾಹು ಮನುಷ್ಯನ ಜೀವನದಲ್ಲಿ ಏರಿಳಿತಗಳನ್ನು ಉಂಟುಮಾಡುವಂತಹ ಗ್ರಹವಾಗಿದೆ. ಈ ದಿನಾಂಕದಲ್ಲಿ ಜನಿಸಿದವರು ಸಾಮಾನ್ಯವಾಗಿ ಖಿನ್ನತೆ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲಲಿದ್ದಾರೆ. ಶೀತ, ಕೆಮ್ಮು, ಹೃದಯದ ತೊಂದರೆ ಹಾಗೂ ಮೂತ್ರದ ಸೋಂಕಿನ ಸಮಸ್ಯೆ ಕೂಡ ಇವರನ್ನು ಕಾಡಲಿದೆ. ಕ್ಯಾರೆಟ್​ ಜ್ಯೂಸ್​, ಸೇಬು ಹಾಗೂ ಬೀಟ್​ರೂಟ್​ ಜ್ಯೂಸ್​ ಸೇವನೆ ಒಳ್ಳೆಯದು. ಸೂರ್ಯಾಸ್ತದ ಬಳಿಕ ಹಣ್ಣನ್ನು ಸೇವನೆ ಮಾಡಿ ಹಾಗೂ ಆದಷ್ಟು ಬೆಳ್ಳಿ ಪಾತ್ರೆಗಳನ್ನು ಬಳಸಿ. ಜನವರಿ, ಫೆಬ್ರವರಿ, ಆಗಸ್ಟ್​ ಹಾಗೂ ಸೆಪ್ಟೆಂಬರ್​​ ನಿಮಗೆ ಒಳ್ಳೆಯ ತಿಂಗಳಲ್ಲ.

ಸಂಖ್ಯೆ 5: 5, 14 ಹಾಗೂ 23ರಂದು ಜನಿಸಿದವರನ್ನು ಬುಧ ಗ್ರಹ ಆಳುತ್ತದೆ. ಬುಧ ಗ್ರಹವು ಮಾತು, ನೆನಪು, ನರಮಂಡಲ ವ್ಯವಸ್ಥೆ ಹಾಗೂ ಮೂಗಿನ ರಂಧ್ರಗಳನ್ನು ಆಳುತ್ತದೆ. ಶೀತ, ಜ್ವರ, ಚರ್ಮ ಸಂಬಂಧಿ ಸಮಸ್ಯೆ, ಕಿಡ್ನಿ ಸಮಸ್ಯೆ ಹಾಗೂ ನಿದ್ರಾಹೀನತೆ ನಿಮ್ಮನ್ನು ಕಾಡಲಿದೆ. ಕ್ಯಾರಟ್​, ಮೂಲಂಗಿ, ಪುದೀನಾ, ಹಸಿರು ತರಕಾರಿ ಸೇವನೆ ಒಳ್ಳೆಯದು. ಜೂನ್​, ಸೆಪ್ಟೆಂಬರ್ ಹಾಗೂ ಡಿಸೆಂಬರ್ ತಿಂಗಳು ಒಳ್ಳೆಯದಲ್ಲ.

ಸಂಖ್ಯೆ 6: 6, 15 ಅಥವಾ 24ರಂದು ಜನಿಸಿದವರನ್ನು ಶುಕ್ರ ಗ್ರಹ ಆಳುತ್ತದೆ. ಈ ದಿನಾಂಕದಂದು ಜನಿಸಿದವರು ಸಾಮಾನ್ಯವಾಗಿ ಭಯ, ಗಂಟಲು ಹಾಗೂ ಶ್ವಾಸಕೋಶದ ಸೋಂಕು, ವೃದ್ಧಾಪ್ಯದಲ್ಲಿ ಹೃದಯ ಸಂಬಂಧಿ ಕಾಯಿಲೆ, ಮಹಿಳೆಯರಲ್ಲಿ ಸ್ತನ ಸಂಬಂಧಿ ದೋಷ, ಜ್ವರ ಅಥವಾ ನಿದ್ರಾಹೀನತೆಯಿಂದ ಬಳಲುತ್ತಾರೆ. ಈ ದಿನಾಂಕಗಳಲ್ಲಿ ಜನಿಸಿದವರು ಹೆಚ್ಚು ಭಾವುಕ ಜೀವಿಗಳಾಗಿದ್ದಾರೆ. ಹೀಗಾಗಿ ನರದೌರ್ಬಲ್ಯ ಸಮಸ್ಯೆ ಕೂಡ ಇರಲಿದೆ. ಸಿಹಿ, ಮಸಾಲೆಯುಕ್ತ ಹಾಗೂ ಎಣ್ಣೆಯುಕ್ತ ಆಹಾರ ಸೇವನೆ ಬೇಡ. ಸೌತೆಕಾಯಿ, ದಾಳಿಂಬೆ, ಬಾದಾಮಿ ಹಾಗೂ ಅಕ್ಕಿಯ ಸೇವನೆ ಒಳ್ಳೆಯದು. ಮೇ, ಅಕ್ಟೋಬರ್​ ಹಾಗೂ ನವೆಂಬರ್​ ಶುಭ ತಿಂಗಳಲ್ಲ.

ಸಂಖ್ಯೆ 7: 7, 16 ಅಥವಾ 25ರಂದು ಜನಿಸಿದವರನ್ನು ಕೇತು ಗ್ರಹ ಆಳುತ್ತದೆ. ಈ ದಿನಾಂಕದಲ್ಲಿ ಜನಿಸಿದವರು ಅಜೀರ್ಣ, ಸಂಧಿವಾತ ಹಾಗೂ ರಕ್ತ ಸಂಬಂಧಿ ಆರೋಗ್ಯ ಸಮಸ್ಯೆಯನ್ನು ಹೊಂದಿರುತ್ತಾರೆ. ಅಲ್ಲದೇ ಇವರು ತುಂಬಾ ಸೂಕ್ಷ್ಮ ಜೀವಿಗಳು. ಸಣ್ಣ ಗೊಂದಲ ಇವರಿಗೆ ಭಾರೀ ತೊಂದರೆಯನ್ನು ಕೊಡುತ್ತದೆ. ತಾಜಾ ಹಣ್ಣಿನ ಸೇವನೆ ಒಳ್ಳೆಯದು. ವಿಟಾಮಿನ್​ ಡಿ ಹಾಗೂ ಇಯುಕ್ತ ಆಹಾರ ಸೇವನೆ ಮಾಡಿ. ಧೂಮಪಾನ, ಮದ್ಯಪಾನ ಅಭ್ಯಾಸ ಒಳ್ಳೆಯದಲ್ಲ. ಫೆಬ್ರವರಿ, ಜುಲೈ ಹಾಗೂ ಆಗಸ್ಟ್​ ತಿಂಗಳು ನಿಮಗೆ ಶುಭಕರವಲ್ಲ.

ಸಂಖ್ಯೆ 8: 17 ಹಾಗೂ 26ರಂದು ಜನಿಸಿದವರನ್ನು ಶನಿಗ್ರಹವು ಆಳಲಿದೆ. ಶನಿ ಆಳ್ವಿಕೆಯಲ್ಲಿರುವ ಇವರು ತಮ್ಮ ವ್ಯಕ್ತಿತ್ವವನ್ನು ತಾವೇ ರೂಪಿಸಿಕೊಳ್ಳುವಂತಹ ಶಕ್ತಿಯುಳ್ಳ ಜನರಾಗಿದ್ದಾರೆ. ರಕ್ತದೊತ್ತಡ, ಹಲ್ಲು ನೋವು, ತಲೆನೋವು, ಯಕೃತ್ತು ಹಾಗೂ ಕರುಳಿಗೆ ಸಂಬಂಧಿಸಿದ ಕಾಯಿಲೆ ನಿಮ್ಮನ್ನು ಕಾಡುತ್ತದೆ. ಬೇಗ ಏಳುವುದು, ವ್ಯಾಯಾಮ ಹಾಗೂ ತಾಜಾ ಗಾಳಿ ಸೇವನೆಯನ್ನು ರೂಢಿ ಮಾಡಿಕೊಳ್ಳಿ. ಜೇನುತುಪ್ಪ ಸೇವನೆ ನಿಮಗೆ ಶ್ರೇಷ್ಠ. ಮನೆಯಲ್ಲಿ ತಯಾರಿಸಿದ ಮಜ್ಜಿಗೆ ಸೇವನೆ ಮಾಡಿ. ಡಿಸೆಂಬರ್​, ಜನವರಿ, ಫೆಬ್ರವರಿ ಹಾಗೂ ಜುಲೈ ತಿಂಗಳು ನಿಮಗೆ ಶುಭವಲ್ಲ.

ಸಂಖ್ಯೆ 9: 9, 18 ಹಾಗೂ 27ರಂದು ಜನಿಸಿದವರನ್ನು ಮಂಗಳ ಗ್ರಹವು ಆಳುತ್ತದೆ. ಮಂಗಳ ಗ್ರಹವು ತಲೆ, ಮುಖ, ಮೂತ್ರಪಿಂಡ, ಮೊಣಕಾಲು, ಮೂತ್ರಕೋಶ, ಸಂತಾನೋತ್ಪತ್ತಿ ಸಂಬಂಧಿ ಅಂಗ ಹಾಗೂ ರಕ್ತಪರಿಚಲನೆಯನ್ನು ಆಳುತ್ತದೆ. ಎಲ್ಲಾ ಮಾದರಿಯ ಜ್ವರಗಳು, ಮೂತ್ರಪಿಂಡದ ಸಂಬಂಧಿ ಸಮಸ್ಯೆ, ಗಂಟಲು ಸಂಬಂಧಿ ಸಮಸ್ಯೆ ಹಾಗೂ ಶ್ವಾಸಕೋಶ ಸಮಸ್ಯೆ ನಿಮ್ಮನ್ನು ಹೆಚ್ಚು ಭಾದಿಸಲಿದೆ. ಎಣ್ಣೆಯುಕ್ತ ಹಾಗೂ ಮಸಾಲೆ ಪದಾರ್ಥ ಸೇವನೆ ಸೂಕ್ತವಲ್ಲ. ಬೆಳ್ಳುಳ್ಳಿ, ಈರುಳ್ಳಿ, ಶುಂಠಿ ಹಾಗೂ ಎಳನೀರು ಸೇವನೆ ಒಳ್ಳೆಯದು. ಬೆಳಗ್ಗೆ ವಾಯುವಿಹಾರ ಮಾಡಿ. ಏಪ್ರಿಲ್, ಮೇ ಹಾಗೂ ನವೆಂಬರ್​ನಲ್ಲಿ ಜಾಗರೂಕರಾಗಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read