HomeLatest Newsಇನ್‌ಸ್ಟಾಗ್ರಾಮ್‌ನಲ್ಲಿ 'Meet Your Younger Self' ಹವಾ : ನಿಮ್ಮ ಬಾಲ್ಯದ ರೂಪವನ್ನು ನೀವೇ ಭೇಟಿ...

ಇನ್‌ಸ್ಟಾಗ್ರಾಮ್‌ನಲ್ಲಿ ‘Meet Your Younger Self’ ಹವಾ : ನಿಮ್ಮ ಬಾಲ್ಯದ ರೂಪವನ್ನು ನೀವೇ ಭೇಟಿ ಮಾಡಿ ಇಲ್ಲಿದೆ ವೈರಲ್ ಪ್ರಾಂಪ್ಟ್ಸ್

ಬೆಂಗಳೂರು: ನೀವು ಈಗ ಹೇಗಿದ್ದೀರಿ ಮತ್ತು ಬಾಲ್ಯದಲ್ಲಿ ಹೇಗಿದ್ದಿರಿ ಎಂಬ ಎರಡು ಫೋಟೋಗಳನ್ನು ಪಕ್ಕಪಕ್ಕದಲ್ಲಿ ಇಟ್ಟು ನೋಡುವುದು ಹಳೆ ಫ್ಯಾಷನ್ ಈಗಿನ ಟ್ರೆಂಡ್ ಏನಿದ್ದರೂ ನಿಮ್ಮ ಬಾಲ್ಯದ ಆವೃತ್ತಿಯನ್ನು ನೀವೇ ಖುದ್ದಾಗಿ ಮುಖಾಮುಖಿ ಭೇಟಿ ಮಾಡುವುದು ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ಈಗ Meet Your Younger Self ಎಂಬ ಎಮೋಷನಲ್ ಟ್ರೆಂಡ್ ಕಿಚ್ಚು ಹಚ್ಚಿದೆ.

ಏನಿದು ಹೊಸ ಟ್ರೆಂಡ್?

ಒಬ್ಬ ವ್ಯಕ್ತಿಯ ಪ್ರಸ್ತುತ ರೂಪ ಮತ್ತು ಅದೇ ವ್ಯಕ್ತಿಯ ಬಾಲ್ಯದ ರೂಪ ಒಂದೇ ಫ್ರೇಮ್‌ನಲ್ಲಿ ಮುಖಾಮುಖಿಯಾಗಿ ಕುಳಿತಿರುವಂತೆ ಈ ಚಿತ್ರವನ್ನು ವಿನ್ಯಾಸಗೊಳಿಸಲಾಗುತ್ತದೆ. ಇದು ಕೇವಲ ಫೋಟೋ ಎಡಿಟಿಂಗ್ ಅಲ್ಲದೆ, ಜೀವನದ ಬೆಳವಣಿಗೆ ಮತ್ತು ನೆನಪುಗಳನ್ನು ಬೆಸೆಯುವ ಸಿನೆಮ್ಯಾಟಿಕ್ ಪೋರ್ಟ್ರೇಟ್‌ನಂತೆ ಕಾಣುತ್ತದೆ.

https://www.instagram.com/reel/DXtWbf9jhVb/?utm_source=ig_web_copy_link&igsh=NTc4MTIwNjQ2YQ==

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ChatGPT ಮತ್ತು AI ಬಳಸಿ ಜನರು ತಮ್ಮ ಬಾಲ್ಯದ ನೆನಪುಗಳಿಗೆ ಮರುಜೀವ ನೀಡುತ್ತಿದ್ದಾರೆ. ನೀವೂ ಇಂತಹ ಅದ್ಭುತ ಫೋಟೋಗಳನ್ನು ಕ್ರಿಯೇಟ್ ಮಾಡಬೇಕೇ? ಹಾಗಿದ್ದರೆ ಈ ಕೆಳಗಿನ ಸೀಕ್ರೆಟ್ ಪ್ರಾಂಪ್ಟ್ (Prompts) ಬಳಸಿ:

1.ಎಮೋಷನಲ್ ಸ್ಟುಡಿಯೋ ಫೋಟೋ (Studio Portrait)

ಇದು ಕಪ್ಪು-ಬಿಳುಪಿನ ಅತ್ಯಂತ ಸುಂದರ ಶೈಲಿ. ಇದರಲ್ಲಿ ನೀವು ಮತ್ತು ನಿಮ್ಮ ಬಾಲ್ಯದ ಆವೃತ್ತಿ ಪರಸ್ಪರ ನೋಡುತ್ತಾ ನಗುತ್ತಿರುವ ಚಿತ್ರ ಸೃಷ್ಟಿಸಬಹುದು.

ಪ್ರಾಮ್ಟ್ :Create an ultra-realistic, soft, emotional black-and-white studio-style photograph. On the left, show my childhood version smiling. On the right, show my present self looking at my younger self with a calm smile.

ಹೀಗೆ ಟ್ರೈ ಮಾಡಿ: “ನನ್ನ ಬಾಲ್ಯದ ಫೋಟೋ ಮತ್ತು ಈಗಿನ ಫೋಟೋ ಬಳಸಿ ಒಂದು ಎಮೋಷನಲ್ ಸ್ಟುಡಿಯೋ ಫೋಟೋ ಸೃಷ್ಟಿಸು. ಎಡಭಾಗದಲ್ಲಿ ನನ್ನ ಬಾಲ್ಯದ ರೂಪ, ಬಲಭಾಗದಲ್ಲಿ ಈಗಿನ ನಾನು. ಮಧ್ಯದಲ್ಲಿ ಒಂದು ಟೇಬಲ್ ಇರಲಿ.”

2.ಪಾರ್ಕ್‌ನಲ್ಲಿ ಬಾಲ್ಯದ ಜೊತೆ ಮಾತುಕತೆ (Outdoor Meet)

ಸಂಜೆಯ ಸೂರ್ಯನ ಬೆಳಕಿನಲ್ಲಿ ಪಾರ್ಕ್ ಒಂದರ ಬೆಂಚ್ ಮೇಲೆ ನಿಮ್ಮ ಬಾಲ್ಯದ ಆವೃತ್ತಿ ಕುಳಿತು ಆಟವಾಡುತ್ತಿದ್ದರೆ, ಅದರ ಪಕ್ಕದಲ್ಲಿ ಈಗಿನ ನೀವು ಕುಳಿತು ಹರಟೆ ಹೊಡೆಯುತ್ತಿರುವಂತೆ ಈ ಫೋಟೋ ಇರಲಿದೆ.

ಪ್ರಾಮ್ಟ್:Create an ultra-realistic image of me meeting my younger self in a peaceful park during sunset. My childhood version sitting on a bench, and my present self having a warm conversation.

ಹೀಗೆ ಟ್ರೈ ಮಾಡಿ: “ಸಂಜೆಯ ಸೂರ್ಯನ ಬೆಳಕಿನಲ್ಲಿ ಪಾರ್ಕ್ ಬೆಂಚ್ ಮೇಲೆ ನನ್ನ ಬಾಲ್ಯದ ರೂಪದ ಜೊತೆ ನಾನು ಕುಳಿತು ಮಾತನಾಡುತ್ತಿರುವಂತೆ ಅಲ್ಟ್ರಾ-ರಿಯಲಿಸ್ಟಿಕ್ ಫೋಟೋ ಸೃಷ್ಟಿಸು.”

3.ಕನ್ನಡಿಯ ಮುಂದೆ ಬಾಲ್ಯದ ಬಿಂಬ (Mirror Magic)

ಇದು ಅತ್ಯಂತ ಕ್ರಿಯೇಟಿವ್ ಐಡಿಯಾ ನೀವು ಕನ್ನಡಿಯ ಮುಂದೆ ನಿಂತಾಗ, ನಿಮ್ಮ ಪ್ರತಿಬಿಂಬದ ಬದಲು ನಿಮ್ಮ ಬಾಲ್ಯದ ಮುಖ ಕನ್ನಡಿಯೊಳಗೆ ನಗುತ್ತಾ ಕಾಣಿಸುತ್ತದೆ.

ಪ್ರಾಮ್ಟ್ :Create a realistic portrait of my present self standing in front of a large mirror, but show my younger self from my childhood photo smiling back at me in the reflection.

ಹೀಗೆ ಟ್ರೈ ಮಾಡಿ: “ನಾನು ಕನ್ನಡಿಯ ಮುಂದೆ ನಿಂತಿರುವ ಫೋಟೋ ಸೃಷ್ಟಿಸು. ಆದರೆ ಕನ್ನಡಿಯೊಳಗೆ ನನ್ನ ಈಗಿನ ಮುಖದ ಬದಲು ನನ್ನ ಬಾಲ್ಯದ ಮುಖ ಕಾಣಿಸುತ್ತಿರಲಿ.”

ಜನರು ಯಾಕೆ ಹುಚ್ಚೆದ್ದು ನೋಡ್ತಿದ್ದಾರೆ?

ಇದು ಬರೀ ಫೋಟೋ ಎಡಿಟಿಂಗ್ ಅಲ್ಲ, ಇದು ನೊಸ್ಟಾಲ್ಜಿಕ್ ಮ್ಯಾಜಿಕ್ ನಾವು ಬೆಳೆದು ಬಂದ ಹಾದಿ ಮತ್ತು ಕಳೆದುಹೋದ ಬಾಲ್ಯವನ್ನು ಈ ರೀತಿ ಒಂದೇ ಫ್ರೇಮ್‌ನಲ್ಲಿ ನೋಡುವುದು ಜನರಿಗೆ ತುಂಬಾ ಎಮೋಷನಲ್ ಅನುಭವ ನೀಡುತ್ತಿದೆ.ನೀವು ಕೂಡ ಇಂದೇ ನಿಮ್ಮ ಬಾಲ್ಯದ ಫೋಟೋಗಳನ್ನು ಅಪ್‌ಲೋಡ್ ಮಾಡಿ, ಈ ಪ್ರಾಂಪ್ಟ್‌ಗಳನ್ನು ಬಳಸಿ ನಿಮ್ಮದೇ ಆದ ವಿಶೇಷ ಫೋಟೋ ಕ್ರಿಯೇಟ್ ಮಾಡಿ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular