ಪೊಲೀಸರ ಕೆಲಸ ಮಹಿಳೆಯರನ್ನು ರಕ್ಷಿಸುವುದು ಮತ್ತು ಮಹಿಳೆಯರ ತಂಟೆಗೆ ಹೋದವರ ವಿರುದ್ಧ ಕ್ರಮ ಕೈಗೊಳ್ಳುವುದು, ಆದರೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಥೆ ಬೇರೆನೆ. ಲೈಂಗಿಕ ಕಿರುಕುಳ ನೀಡಿದ ಪೊಲೀಸ್ ಸಿಬ್ಬಂದಿಗೆ ಧರ್ಮದೇಟು ನೀಡಿದ ಘಟನೆ ಕಾನ್ಪುರದಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಓರ್ವ ಯುವತಿ ಕಾನ್ಪುರದ ಗೋಲ್ ಚೌರಾಹಾಗೆ ಸ್ಟಾಂಪ್ ಪೇಪರ್ ಖರೀದಿಸಲು ಹೋದಾಗ ಅಲ್ಲಿದ್ದ ಒಬ್ಬ ಪೊಲೀಸ್ ಅವಳಿಗೆ ಕಿರುಕುಳ ನೀಡಲು ಮತ್ತು ಅವಳ ಕಡೆಗೆ ಅಶ್ಲೀಲ ಸನ್ನೆಗಳನ್ನು ಮಾಡಲು ಪ್ರಾರಂಭಿಸಿದನು. ಹುಡುಗಿ ಮತ್ತು ಅವಳ ಸಹೋದರಿ ಧೈರ್ಯವನ್ನು ಪ್ರದರ್ಶಿಸಿದರು, ಪೊಲೀಸರ ಕೈ ಹಿಡಿದು ಪೊಲೀಸ್ ಠಾಣೆಗೆ ಎಳೆದೊಯ್ದರು.
ದಾರಿಯಲ್ಲಿ, ಪೊಲೀಸ್ ಅಧಿಕಾರಿ ತನ್ನ ಮುಖ ಮರೆಮಾಚಲು ಪ್ರಯತ್ನಿಸಿದರು, ಆದರೆ ಈ ಧೈರ್ಯಶಾಲಿ ಹುಡುಗಿಯರು ಅವರನ್ನು ಬಿಡಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಪೊಲೀಸ್ ಸಿಬ್ಬಂದಿಯ ವರ್ತನೆಗೆ ಬೇಸರ ವ್ಯಕ್ತವಾಗಿದ್ದು, ಹೆಣ್ಣು ಮಕ್ಕಳ ಧೈರ್ಯಕ್ಕೆ ನೆಟ್ಟಿಗರು ಶಹಬ್ಬಾಷ್ ಎಂದಿದ್ದಾರೆ.
शर्मनाक
— The News Basket (@thenewsbasket) October 29, 2025
कानपुर के गोल चौराहे पर एक लड़की स्टांप पेपर लेने गई थी तभी वहां मौजूद पुलिसकर्मी ने लड़की को छेड़ना शुरू कर दिया और उसके साथ अश्लील हरकत किया
लड़की और लड़की की बहन ने बहादुरी दिखाई, पुलिस वाले का हाथ पकड़ कर खींचते हुए पुलिस चौकी ले गई …रास्ते में पुलिस वाले ने अपना… pic.twitter.com/X2wunUiZGf

 
			 
		 
		 
		 
		 Loading ...
 Loading ... 
		 
		 
		