ನವದೆಹಲಿ : ಯುವಕನೋರ್ವ ಕಾರು ಹತ್ತಿ ಲವರ್ ಗೆ ಕಿಸ್ ಕೊಟ್ಟು ನಡುರಸ್ತೆಯಲ್ಲೇ ಭಯಾನಕ ಸ್ಟಂಟ್ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.ಈ ಕಣ್ಣಲ್ಲಿ ಇನ್ನು ಏನೇನ್ ನೋಡಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ ಹಾಗೂ ಜೋಡಿಗಳ ವಿರುದ್ಧ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ.
ದೆಹಲಿಯ ಸಾಕೇತ್ ಜೆ ಬ್ಲಾಕ್ನ ಆಘಾತಕಾರಿ ವಿಡಿಯೋವೊಂದು ಆನ್ಲೈನ್ನಲ್ಲಿ ವೈರಲ್ ಆಗುತ್ತಿದೆ. ಯುವಕ ಚಲಿಸುವ ಕಾರಿನ ಛಾವಣಿಯ ಮೇಲೆ ಹತ್ತಿ ಹುಚ್ಚಾಟ ಮೆರೆದಿದ್ದಾನೆ. ಅಪಾಯಕಾರಿ ಸಾಹಸ ಅಲ್ಲಿಗೆ ನಿಲ್ಲುವುದಿಲ್ಲ.
ಒಬ್ಬ ಹುಡುಗಿ ಕಾರಿನ ಕಿಟಕಿಯಿಂದ ಹೊರಗೆ ಬಾಗಿ ಚುಂಬಿಸುತ್ತಾಳೆ ಮತ್ತು ಇಬ್ಬರೂ ಪರಸ್ಪರ ಚುಂಬಿಸುತ್ತಾರೆ.
ಈ ದೃಶ್ಯವನ್ನು ಚಿತ್ರೀಕರಿಸುತ್ತಿರುವ ವ್ಯಕ್ತಿಯೊಬ್ಬರು ಆ ಹುಡುಗನಿಗೆ ಕೇವಲ 20 ಅಥವಾ 21 ವರ್ಷ ವಯಸ್ಸಾಗಿದೆ ಎಂದು ಹೇಳುತ್ತಿದ್ದಾರೆ. ಕ್ಲಿಪ್ ವೈರಲ್ ಆದ ನಂತರ ನೆಟ್ಟಿಗರು ಈ ಕೃತ್ಯವನ್ನು ಟೀಕಿಸಿದರು ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರನ್ನು ಒತ್ತಾಯಿಸಿದರು.
Usual Day in Delhi Location – Saket J-block pic.twitter.com/yTuXO6hkUh
— Ghar Ke Kalesh (@gharkekalesh) November 18, 2025
