ಬೆಂಗಳೂರು : ಯುವಕ ಪ್ರೀತಿಸಲು ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದು ಆತನನ್ನ ಪ್ರಕರಣದಲ್ಲಿ ಸಿಲುಕಿಸಲು ಯುವತಿಯೋರ್ವಳು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಬಂಧಿತ ಮಹಿಳೆಯನ್ನು ಗುಜರಾತ್ ಮೂಲದ ರೆನೆ ಜೋಶಿಲ್ದಾ ಎಂದು ಗುರುತಿಸಲಾಗಿದೆ ಆಕೆ ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಆದರೆ ಆತ ಮಾತ್ರ ಪ್ರೀತಿಸಲು ನಿರಾಕರಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹಿಳೆ ಆತನನ್ನು ಇದರಲ್ಲಿ ಸಿಲುಕಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾಳೆ.
ಬೆಂಗಳೂರು ಸೇರಿದಂತೆ ದೇಶದ ಹಲವು ಕಡೆ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಮಹಿಳಾ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಗುಜರಾತ್ ಮೂಲದ ರೆನೆ ಜೋಶಿಲ್ದಾ ಎಂದು ಗುರುತಿಸಲಾಗಿದೆ. ಈಕೆ ಗುಜರಾತ್ ಮೂಲದ ಟೆಕ್ಕಿ ಆಗಿದ್ದು, ಬೆಂಗಳೂರಿನ 7 ಶಾಲೆ ಸೇರಿ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಳು.
ಬೆಂಗಳೂರು ಮಾತ್ರವಲ್ಲದೇ ಚೆನ್ನೈ, ಗುಜರಾತ್, ಹೈದರಾಬಾದ್ ಸೇರಿದಂತೆ ಹಲವು ಕಡೆ ಶಾಲೆಗಳಿಗೆ ಈಕೆ ಬೆದರಿಕೆ ಸಂದೇಶ ಕಳುಹಿಸಿದ್ದಳು. ಸೈಬರ್ ಕ್ರೈಮ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
