HomeLatest NewsBIG NEWS: ಕೈ ಕಟ್ ಮಾಡಿಕೊಂಡು ಅಪಾರ್ಟ್ ಮೆಂಟ್ ನ 11 ನೇ ಮಹಡಿಯಿಂದ ಹಾರಿ...

BIG NEWS: ಕೈ ಕಟ್ ಮಾಡಿಕೊಂಡು ಅಪಾರ್ಟ್ ಮೆಂಟ್ ನ 11 ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಯುವಕ

ಲಖನೌ: ಯುವಕನೊಬ್ಬ ಕೈ ಕಟ್ ಮಾಡಿಕೊಂಡು ಅಪಾರ್ಟ್ ಮೆಂಟ್ ನ 11ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.

28 ವರ್ಷದ ಯಜ್ಞ ಪಾಂಡೆ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಗಾಜಿಯಾಬಾದ್ ನ ಇಂದಿರಾಪುರಂ ಸೊಸೈಟಿಯ ನಿವಾಸಿಯಾಗಿದ್ದ ಯಜ್ಞ ಪಾಂಡೆ, ಬೆಳಗಿನ ಜಾವ ತನ್ನ ಕೈ ಮಣಿಕಟ್ಟು ಕತ್ತರಿಸಿಕೊಂಡು ಅಪಾರ್ಟ್ ಮೆಂಟ್ ನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯಜ್ಞ ಪಾಂಡೆ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಯುವಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular