ಬೆಂಗಳೂರು : ಅಪ್ರಾಪ್ತ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಯೋಗ ಗುರು ಇದೀಗ ಅಂದರ್ ಆಗಿದ್ದಾನೆ.
ಬಂಧಿತನನ್ನು ಯೋಗಗುರು ನಿರಂಜನ ಮೂರ್ತಿ ಎಂದು ಗುರುತಿಸಲಾಗಿದೆ. ಈತ ರಾಜ ರಾಜೇಶ್ವರಿ ನಗರದಲ್ಲಿ ಯೋಗ ಸೆಂಟರ್ ನಡೆಸುತ್ತಿದ್ದನು.
ಯೋಗ ತರಬೇತಿ ಕೇಂದ್ರ ನಡೆಸುತ್ತಿದ್ದ ಆರೋಪಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈತ ಹಲವು ಯುವತಿಯರನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಬಾಲಕಿ ನೀಡಿದ ದೂರಿನ ಅನ್ವಯ ಪೋಕ್ಸೋ ಕೇಸ್ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗ ಗುರು ನಿರಂಜನ ಮೂರ್ತಿ ಬಂಧಿಸಲಾಗಿದೆ. ಈತನ ಮೇಲೆ 7-8 ಮಹಿಳೆಯರ ಮೇಲೂ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ತನಿಖೆಯಲ್ಲಿ ಬೆಚ್ಚಿ ಬೀಳಿಸುವ ಸಂಗತಿ ಬಯಲಾಗಿದೆ.