HomeLatest NewsBREAKING NEWS: ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿಸಿದ್ದು ವಿಜಯೇಂದ್ರ: ಯತ್ನಾಳ್ ಹೊಸ ಬಾಂಬ್!

BREAKING NEWS: ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿಸಿದ್ದು ವಿಜಯೇಂದ್ರ: ಯತ್ನಾಳ್ ಹೊಸ ಬಾಂಬ್!

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಡಿದೆದ್ದಿದ್ದಾರೆ. ರಾಜ್ಯಾಧ್ಯಕ್ಷರ ಬದಲಾವಣೆಯಾಗಲೇಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿಸಿದ್ದು ಯಾರು? ವಿಜಯೇಂದ್ರ. ಬಿ.ವೈ.ವಿಜಯೇಂದ್ರ ಹಾಗೂ ಡಿ.ಕೆ.ಶಿವಕುಮಾರ್ ಸೇರಿ ರಮೇಶ್ ಜಾರಕಿಹೊಳಿ ಜೀವನವನ್ನೇ ಹಾಳು ಮಾಡಿದರು ರೆಂದು ಹೊಸ ಬಾಂಬ್ ಸಿಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ವಿಜಯೇಂದ್ರ ವಿರುದ್ಧದ ನಮ್ಮ ಟೀಂ ಬಹಳ ದೊಡ್ಡದಿದೆ. ತಟಸ್ಥರು ಕೂಡ ವಿಜಯೇಂದ್ರ ವಿರುದ್ಧವಿದ್ದಾರೆ. ಅಷ್ಟೇ ಏಕೆ? ಆರ್.ಅಶೋಕ್, ಬೊಮ್ಮಾಯಿ, ಅಶ್ವತ್ಥನಾರಾಯಣ, ಸಿ.ಟಿ.ರವಿ ಒಳಗೊಳಗೆ ವಿಜಯೇಂದ್ರ ವಿರುದ್ಧವಿದ್ದಾರೆ. ಎಲ್ಲರೂ ಒಳಗೊಳಗೇ ವಿರೋಧಿಸುತ್ತಿದ್ದಾರೆ. ಇಂತಹ ನಾಟಕ ಕಂಪನಿಯಿಂದಲೇ ಬಿಜೆಪಿ ಈ ಸ್ಥಿತಿಗೆ ಬಂದಿದೆ. ನಮ್ಮ ಹಾಗೇ ಯಾರೂ ಗಟ್ಟಿಯಾಗಿ ನಿಲ್ಲಲಿಲ್ಲ ಎಂದರು.

ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಎಲ್ಲಾ ಒಂದು. ಮುಂದಿನ ಕೆಲವೇ ದಿನಗಳಲ್ಲಿ ಬೆಳಗಾವಿಯಲ್ಲಿ ಸಭೆ ಸೇರುತ್ತೇವೆ ಆಗ ಗೊತ್ತಾಗಲಿದೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular