HomeKarnatakaನನ್ನ ಬಗ್ಗೆ ಟೀಕೆ ಮಾಡಲೆಂದೇ ವಿಜಯೇಂದ್ರ ಕೆಲವರನ್ನು ಬಿಟ್ಟಿದ್ದಾರೆ; ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಯತ್ನಾಳ್ ಆರೋಪ

ನನ್ನ ಬಗ್ಗೆ ಟೀಕೆ ಮಾಡಲೆಂದೇ ವಿಜಯೇಂದ್ರ ಕೆಲವರನ್ನು ಬಿಟ್ಟಿದ್ದಾರೆ; ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಯತ್ನಾಳ್ ಆರೋಪ

ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸ್ವಪಕ್ಷದ ನಾಯಕರ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧವೂ ಆರೋಪ ಮಾಡಿದ್ದಾರೆ.

ಯತ್ನಾಳ್ ವಿರುದ್ಧ ಮುರುಗೇಶ್ ನಿರಾಣಿ ವಾಗ್ದಾಳಿ ವಿಚಾರವಾಗಿ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ನಿರಾಣಿಯವರನ್ನು ಬೀದಿನಾಯಿ, ಹಂದಿ ಎಂದು ಜರಿದಿದ್ದಾರೆ. ಕೆಲವೊಂದು ಬೀದಿನಾಯಿಗಳ ಬಗ್ಗೆ ನಾನು ಉತ್ತರ ಕೊಡಲ್ಲ. ಹಂದಿಗಳು ಹಾಗೇ ಒದರುತ್ತಾ ಹೋಗುತ್ತವೆ. ಹಂದಿಗಳ ಬಗ್ಗೆ ನೀವೆಲ್ಲಾ ಕೇಳಬೇಡಿ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲಲ್ಲಿ ಕೆಲವೊಂದನ್ನು ವಿಜಯೇಂದ್ರ ಬಿಟ್ಟಿದ್ದಾರೆ. ಅವು ಮಾತಾಡುತ್ತವೆ. ನನ್ನ ಬಗ್ಗೆ ಟೀಕೆ ಮಾಡಲೆಂದೆ ವಿಜಯೇಂದ್ರ ಕೆಲವರನ್ನು ಬಿಟ್ಟಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ವಿರುದ್ಧ ಯತ್ನಾಳ್ ನೇರ ಆರೋಪ ಮಾಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular