HomeKarnatakaಹಿಂದೂ ಧರ್ಮ ಮತ್ತು ಆರ್​​.ಎಸ್.​​ಎಸ್​​ ವಿರುದ್ಧ ಮಾತಾಡುವವರಿಗೆ ರಾಹುಲ್​​ ಗಾಂಧಿ ಕಾಂಗ್ರೆಸ್​​ನಲ್ಲಿ ಬಡ್ತಿ​​ ಕೊಡುತ್ತಾರೆ: ಯತ್ನಾಳ್...

ಹಿಂದೂ ಧರ್ಮ ಮತ್ತು ಆರ್​​.ಎಸ್.​​ಎಸ್​​ ವಿರುದ್ಧ ಮಾತಾಡುವವರಿಗೆ ರಾಹುಲ್​​ ಗಾಂಧಿ ಕಾಂಗ್ರೆಸ್​​ನಲ್ಲಿ ಬಡ್ತಿ​​ ಕೊಡುತ್ತಾರೆ: ಯತ್ನಾಳ್ ವಾಗ್ದಾಳಿ

ವಿಜಯಪುರ: ದೇಶ, ಹಿಂದೂ ಧರ್ಮ ಮತ್ತು ಆರ್​​.ಎಸ್.​​ಎಸ್​​ ವಿರುದ್ಧ ಮಾತಾಡುವವರಿಗೆ ರಾಹುಲ್​​ ಗಾಂಧಿ ಕಾಂಗ್ರೆಸ್​​ನಲ್ಲಿ ಬಡ್ತಿ​​ ಕೊಡುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಆರ್.ಎಸ್.ಎಸ್ ವಿರುದ್ಧ ಮಾತನಾಡಿದ್ದಕ್ಕೆ ಬಿ.ಕೆ ಹರಿಪ್ರಸಾದ್​​​ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಪ್ರಿಯಾಂಕ್​​ ಖರ್ಗೆಗೆ ಗೃಹ ಸಚಿವ ಹುದ್ದೆ ಸಿಕ್ಕಿದ್ದು ಎಂದು ಟೀಕಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದೂ ಹೀಗೆಯೇ. ದೇಶದ ವಿರುದ್ಧ ಹೇಳಿಕೆ ನೀಡುವುದು, ಹಿಂದೂಗಳ ಬಗ್ಗೆ ಹಗುರವಾಗಿ ಮಾತನಾಡುವುದು ಕಾಂಗ್ರೆಸ್‌ನ ಸಂಸ್ಕೃತಿಯಾಗಿದೆ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ನೇರ ನೇಮಕಾತಿ ಆದೇಶವನ್ನು ತೀವ್ರವಾಗಿ ವಿರೋಧಿಸಿರುವ ಯತ್ನಾಳ್​​, ಇದು ಭ್ರಷ್ಟಾಚಾರಕ್ಕೆ ನೇರ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular