HomeKarnatakaBIG NEWS: ಟಾರ್ಗೆಟ್ ಮಾಡಲು ಪ್ರತಾಪ್ ಸಿಂಹ ನ್ಯಾಷನಲ್ ಲೀಡರಾ? ಯತೀಂದ್ರ ಸಿದ್ದರಾಮಯ್ಯ ಪ್ರಶ್ನೆ

BIG NEWS: ಟಾರ್ಗೆಟ್ ಮಾಡಲು ಪ್ರತಾಪ್ ಸಿಂಹ ನ್ಯಾಷನಲ್ ಲೀಡರಾ? ಯತೀಂದ್ರ ಸಿದ್ದರಾಮಯ್ಯ ಪ್ರಶ್ನೆ

ಮೈಸೂರು: ಸಿಎಂ ಸಿದ್ದರಾಮಯ್ಯ ತಮ್ಮ ಮಗನ ರಾಜಕೀಯಕ್ಕಾಗಿ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ಸಂಸದ ಪ್ರತಾಪ್ ಸಿಂಹ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಶಾಸಕ, ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ, ಟಾರ್ಗೆಟ್ ಮಾಡಲು ಅವರೇನು ನ್ಯಾಷನಲ್ ಲೀಡರಾ? ಎಂದು ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಪ್ರತಾಪ್ ಸಿಂಹ ತಮ್ಮನ್ನು ನ್ಯಾಷನಲ್ ಲೀಡರ್ ಅಂದುಕೊಂಡಿದ್ದಾರೆ. ನ್ಯಾಷನಲ್ ಲೀಡರ್ ಎಂಬ ಭ್ರಮೆಯಲ್ಲಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಮ್ಮ ತಂದೆ ಯಾವತ್ತೂ ಟಾರ್ಗೆಟ್ ರಾಜಕಾರಣ ಮಾಡಿಲ್ಲ. ತಮಗೆ ರಾಜಕೀಯವಾಗಿ ಅನೇಕರು ಅನ್ಯಾಯ ಮಾಡಿದ್ದರೂ ಅನ್ಯಾಯ ಮಾಡಿದವರ ವಿರುದ್ಧ ರಾಜಕಾರಣ ಮಾಡಿಲ್ಲ. ಹೀಗಿರುವಾಗ ಪ್ರತಾಪ್ ಸಿಂಹರನ್ನು ಯಾಕೆ ಟಾರ್ಗೆಟ್ ಮಾಡ್ತಾರೆ? ಎಂದು ಕೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ತಪ್ಪು ಮಾಡಿದ್ದಾರೆ, ಕೇಸ್ ಆಗಿದೆ. ತನ್ನ ಸಹೋದರನ ತಪ್ಪು ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಇಲ್ಲಿ ನನ್ನ ರಾಜಕೀಯದ ಪ್ರಶ್ನೆ ಇಲ್ಲ. ನಾನು ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳಿಯೂ ಇಲ್ಲ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular