HomeEntertainment'ಕಾಂಡೋಮ್ ಆಡ್ ಮಾಡೋದಿದ್ರೆ ಪೈಸಾ ತಗೊಂಡೇ ಮಾಡ್ತೀನಿ': ಟ್ರೋಲರ್ಸ್‌ಗೆ ಯಶ್ ಹಾಸ್ಯಮಯ ಕೌಂಟರ್

‘ಕಾಂಡೋಮ್ ಆಡ್ ಮಾಡೋದಿದ್ರೆ ಪೈಸಾ ತಗೊಂಡೇ ಮಾಡ್ತೀನಿ’: ಟ್ರೋಲರ್ಸ್‌ಗೆ ಯಶ್ ಹಾಸ್ಯಮಯ ಕೌಂಟರ್

ಕನ್ನಡದ ಹೆಮ್ಮೆಯ ನಟ ಯಶ್ ಅಭಿನಯದ ಮುಂಬರುವ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ “ತಬಾಹಿ” ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ನಟಿ ಕಿಯಾರಾ ಅಡ್ವಾಣಿ ಹಾಗೂ ಯಶ್ ನಡುವಿನ ಬೋಲ್ಡ್ ದೃಶ್ಯಗಳನ್ನು ಕಂಡ ಕೆಲ ನೆಟ್ಟಿಗರು ಈ ಹಾಡನ್ನು ಕಾಂಡೋಮ್ ಜಾಹೀರಾತಿಗೆ ಹೋಲಿಸಿ ಟ್ರೋಲ್ ಮಾಡಿದ್ದರು. ಇದೀಗ ಈ ಟ್ರೋಲ್ಗಳಿಗೆ ನಟ ಯಶ್ ತಮ್ಮದೇ ಶೈಲಿಯಲ್ಲಿ ಹಾಸ್ಯಸ್ಪರ್ಶದ ಖಡಕ್ ಉತ್ತರ ನೀಡಿದ್ದಾರೆ.

ಆಪ್ ಕೀ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಯಶ್, “ಒಂದು ವೇಳೆ ನಾನು ಕಾಂಡೋಮ್ ಜಾಹೀರಾತಿನಲ್ಲಿ ನಟಿಸುವುದಿದ್ದರೆ ಅದಕ್ಕೆ ಸರಿಯಾದ ಸಂಭಾವನೆ ಪಡೆದೇ ನಟಿಸುತ್ತೇನೆ, ಹೀಗೆ ಉಚಿತವಾಗಿ ಮಾಡುವುದಿಲ್ಲ” ಎಂದು ನಗುತ್ತಲೇ ತಿರುಗೇಟು ನೀಡಿದರು.

ಇದೇ ವೇಳೆ ಸಿನಿಮಾದಲ್ಲಿನ ಬೋಲ್ಡ್ ದೃಶ್ಯಗಳು ಮತ್ತು ಅಶ್ಲೀಲತೆಯ ಕುರಿತು ಮಾತನಾಡಿದ ಅವರು, “ಚಿತ್ರದಲ್ಲಿ ಯಾವುದೇ ರೀತಿಯ ಅಶ್ಲೀಲತೆಗೆ ಜಾಗವಿಲ್ಲ. ಗಮನವಿಟ್ಟು ನೋಡಿದರೆ ತಿಳಿಯುತ್ತದೆ, ನಾನು ಹಾಡಿನಲ್ಲಿ ಕಿಸ್ ಕೂಡ ಮಾಡಿಲ್ಲ. ಪ್ರತಿಯೊಂದಕ್ಕೂ ಒಂದು ಮಿತಿಯಿರುತ್ತದೆ ಮತ್ತು ಅದನ್ನು ನಾವು ಸರಿಯಾಗಿ ಅರ್ಥೈಸಿಕೊಂಡಿದ್ದೇವೆ. ದೃಶ್ಯಗಳನ್ನು ಕಲಾತ್ಮಕವಾಗಿ ಸೆರೆಹಿಡಿದಾಗ ಬರುವ ಸಿನಿಮಾ ಪ್ರಭಾವವೇ ಬೇರೆ” ಎಂದು ಸ್ಪಷ್ಟಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ‘ಟಾಕ್ಸಿಕ್’ ಸಿನಿಮಾದ ಕಥಾಹಂದರದ ಬಗ್ಗೆ ಸುಳಿವು ನೀಡಿದ ಯಶ್, ಈ ಸಿನಿಮಾ ಇಂದಿನ ಜೆನ್-ಜಿ ಯುವಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಲಾಗಿದೆ ಎಂದರು. ಹಿರಿಯ ತಲೆಮಾರಿನವರು ವಿಧಿಸಿರುವ ಹಳೆಯ ನಿಯಮಗಳು, ಯುವಜನತೆಯ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳು ಹಾಗೂ ಅವರು ಎದುರಿಸುವ ಸವಾಲುಗಳ ಸುತ್ತ ಸಿನಿಮಾದ ಮುಖ್ಯ ಕಥೆ ಸಾಗಲಿದೆ ಎಂದು ಅವರು ವಿವರಿಸಿದರು.

ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್ಸ್ಟಾರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಸಿನಿಮಾ ಆಗಸ್ಟ್ 26 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಕನ್ನಡ ಹಾಗೂ ಇಂಗ್ಲಿಷ್ ಮೂಲ ಭಾಷೆಗಳ ಜೊತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾಗಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular