HomeKarnatakaಸಮಾವೇಶ ನಡೆದ ಮಹಾರಾಜಾ ಕಾಲೇಜು ಮೈದಾನದಲ್ಲಿ ಕಸ ತೆಗೆದ ಯದುವೀರ್ ಒಡೆಯರ್, ಪತ್ನಿ ತ್ರಿಷಿಕಾ

ಸಮಾವೇಶ ನಡೆದ ಮಹಾರಾಜಾ ಕಾಲೇಜು ಮೈದಾನದಲ್ಲಿ ಕಸ ತೆಗೆದ ಯದುವೀರ್ ಒಡೆಯರ್, ಪತ್ನಿ ತ್ರಿಷಿಕಾ

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ನಿನ್ನೆ ನಡೆದ ಬಿಜೆಪಿ ಸಮಾವೇಶದ ಸ್ಥಳದಲ್ಲಿ ಇಂದು ಕಸ ತೆಗೆಯುವ ಮೂಲಕ ಸ್ವಚ್ಚತಾ ಕಾರ್ಯ ನಡೆಸಿದ್ದಾರೆ.

ಯದುವೀರ್ ಒಡೆಯರ್ ಪರ ಚುನಾವಣಾ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮೈಸೂರಿಗೆ ಆಗಮಿಸಿದ್ದರು. ಮೈಸೂರಿನ ಮಹಾರಾಜಾ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲಾಗಿತ್ತು. ಸಮಾವೇಶದಲ್ಲಿ 60 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಸಮಾವೇಶದ ಸ್ಥಳದಲ್ಲಿ ಕಸ ಬಿದ್ದಿದ್ದು, ಇಂದು ಬೆಳಿಗ್ಗೆ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್, ಪತ್ನಿ ತ್ರಿಷಿಕಾ ಮೈದಾನದಲ್ಲಿ ಕಸ ತೆಗೆಯುವ ಮೂಲಕ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮೈದಾನದಲ್ಲಿ ನಡೆಯುತ್ತಿದ್ದ ಸ್ವಚ್ಛತಾ ಕಾರ್ಯದ ವೇಳೆ ಯದುವೀರ್ ಒಡೆಯರ್, ಹಾಗೂ ಪತ್ನಿ ತ್ರಿಷಿಕಾ ಪಾಲ್ಗೊಂಡು ಮೈದಾನದ ತುಂಬೆಲ್ಲ ಬಿದ್ದ ಕಸಗಳನ್ನು ತೆಗೆದು ಸ್ವಚ್ಛಗೊಳಿಸಿದ್ದಾರೆ. ಈ ಮೂಲಕ ಮಹಾರಾಜರು ಸಾಮಾನ್ಯ ಪ್ರಜೆಗಳಂತೆ ಜನರೊಂದಿಗೆ ಬೆರೆತು ಸ್ವಚ್ಚತಾ ಅಭಿಯಾನ ನಡೆಸಿ ಜನರ ಮನಸ್ಸಿಗೆ ಇನ್ನಷ್ಟು ಹತ್ತಿರವಾದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular