HomeKarnatakaBIG NEWS: ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ ಶಿಕ್ಷಕ: FIR ದಾಖಲು

BIG NEWS: ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ ಶಿಕ್ಷಕ: FIR ದಾಖಲು

ಯಾದಗಿರಿ: ವಿದ್ಯಾರ್ಥಿ ಕಡಿಮೆ ಅಂಕ ಪಡೆದಿದ್ದಾನೆ ಎಂಬ ಕಾರಣಕ್ಕೆ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಮನ ಬಂದಂತೆ ಥಳಿಸಿದ್ದು, ಶಿಕ್ಷಕನ ಏಟಿಗೆ ಬಾಲಕನ ಬೆನ್ನಿನ ತುಂಬೆಲ್ಲ ಬಾಸುಂಡೆ ಬಂದಿದೆ. ಈ ಘಟನೆ ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದ ಶಾಲೆಯಲ್ಲಿ ನಡೆದಿದೆ.

ಸೈದಾಪುರದ ಮಹಾವೀರ್ ಜೈಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ಘಟನೆ ನಡೆದಿದೆ. ನಾಲ್ಕನೇ ತರಗತಿ ವಿದ್ಯಾರ್ಥಿ ಯುವರಾಜ, ಗಣಿತ ವಿಷಯದಲ್ಲಿ ಕಡಿಮೆ ಅಂಕ ಪಡೆದಿದ್ದಾನೆ ಎಂದು ಶಿಕ್ಷಕ ಡೆಲ್ವಿನ್ ವಿದ್ಯಾರ್ಥಿಗೆ ಮನಬಂದಂತೆ ಚಡಿ ಏಟು ನೀಡಿದ್ದಾನೆ. ಚಡಿ ಏಟಿಗೆ ವಿದ್ಯಾರ್ಥಿಯ ಬೆನ್ನಿಗೆ ಬಾಸುಂಡೆ ಬಂದಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ.

ವಿಷಯ ತಿಳಿಯುತ್ತಿದ್ದ ವಿದ್ಯಾರ್ಥಿ ಪೋಷಕರು ಸೈದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ವಿದ್ಯಾರ್ಥಿ ಸ್ಥಿತಿ ಕಂಡು ಪೊಲೀಸರು ಶಿಕ್ಷಕ ಡೆಲ್ವಿನ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular