ಯಾದಗಿರಿ: ರಕ್ಷಣೆ ನೀಡಬೇಕಾದ ಪೊಲೀಸಪ್ಪನೇ ಲವ್ ಸೆಕ್ಸ್ ದೋಖಾ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಪೊಲೀಸ್ ಕಾನ್ಸ್ ಟೇಬಲ್ ಓರ್ವ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಗರ್ಭಿಣಿಯಾಗುತ್ತಿದ್ದಂತೆ ಟ್ಯಾಬ್ಲೆಟ್ ಕೊಟ್ಟು ಅಬಾರ್ಷನ್ ಮಾಡಿರುವ ಘಟನೆ ನಡೆದಿದೆ.
ಸೈದಾಪುರ ಠಾಣೆ ಕಾನ್ಸ್ ಟೇಬಲ್ ಬಲರಾಮನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪ್ರೀಟಿ ನಾಟಕವಾಡಿ ೧೬ ವರ್ಷದ ಅಪ್ರಾಪ್ತೆಯ ಮೇಲೆ ಎರಡು ವರ್ಷ ಅತ್ಯಾಚಾರವೆಸಗಿದ್ದ. ಬಾಲಕಿ ಗರ್ಭವತಿಯಾಗುತ್ತಿದ್ದಂತೆ ಟ್ಯಾಬ್ಲೆಟ್ ಕೊಟ್ಟು ಅಬಾರ್ಷನ್ ಮಾಡಿಸಿದ್ದ. ಬಳಿಕ ಆಕೆಗೆ ೧೮ ವರ್ಷ ತುಂಬುತಿದ್ದಂತೆ ೨೦೨೪ರಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದ. ಆದರೆ ಆಕೆಯನ್ನು ಮನೆಗೆ ಸೇರಿಸಿಕೊಳ್ಳಲು ಕಾನ್ಸ್ ಟೇಬಲ್ ಕುಟುಂಬದವರು ನಿರಾಕರಿಸಿದ್ದಾರೆ. ಹೀಗಾಗಿ ಬಾಲಕಿಗೂ ನನಗೂ ಯಾಅವುದೇ ಸಂಬಂಧವಿಲ್ಲ ಎಂದು ಕಾನ್ಸ್ಟೇಬಲ್ ಮೋಸ ಮಾಡಿದ್ದಾನೆ.
ಇದರಿಂದ ಮನನೊಂದ ಬಾಲಕಿ ಕುಟುಂಬದವರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಾನ್ಸ್ ಟೇಬಲ್ ಬಲರಾಮನ ವಿರುದ್ದ ದೂರು ನೀಡಿದ್ದಾರೆ.