
ಐಐಟಿ ರೂರ್ಕಿಗೆ ಸೇರಿದ್ದು ಎನ್ನಲಾದ ನಕಲಿ ನೋಟಿಸ್ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು ಇದರಿಂದ ಜನರು ಗೊಂದಲಕ್ಕೀಡಾಗಿದ್ದಾರೆ. 2019ರ ವರ್ಷದ ಈ ನೋಟಿಸ್ನಲ್ಲಿ ವಿದ್ಯಾರ್ಥಿಗಳು ಶವರ್ನಲ್ಲಿ ಹಸ್ತಮೈಥುನ ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಬರೆಯಲಾಗಿದೆ.
ಶವರ್ಗಳಲ್ಲಿ ಹಸ್ತ ಮೈಥುನ ಮಾಡಿಕೊಳ್ಳುವುದು ಹಾಸ್ಟೆಲ್ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದಂತೆ ಎಂದು ಈ ನೋಟಿಸ್ನಲ್ಲಿ ತಿಳಿಸಲಾಗಿದೆ. ಚರಂಡಿಯಲ್ಲಿ ಅಪಾರ ಪ್ರಮಾಣದ ವೀರ್ಯ ಶೇಖರಣೆಯಾಗುತ್ತಿದ್ದು, ಇವುಗಳ ನಿರ್ವಹಣೆ ಮಾಡಲು ಸಾವಿರಾರು ರೂಪಾಯಿ ಖರ್ಚು ಹಾಸ್ಟೆಲ್ ಮೇಲೆ ಬೀಳುತ್ತಿದೆ ಎಂದು ನಕಲಿ ನೋಟಿಸ್ನಲ್ಲಿ ತಿಳಿಸಲಾಗಿದೆ.
ಇದರ ಜೊತೆಯಲ್ಲಿ ವಿದ್ಯಾರ್ಥಿಗಳು ಇನ್ಮೇಲೆ ತಮ್ಮ ಕೋಣೆಯಲ್ಲಿಯೇ ಹಸ್ತಮೈಥುನ ಮಾಡಿಕೊಳ್ಳಬೇಕು. ಮೀಡಿಯಂ ಮಿಠಾಯಿ ಎಂಬ ಹೆಸರಿನ ಎಕ್ಸ್ ಖಾತೆಯು ಈ ಪೋಸ್ಟ್ನ್ನು ಶೇರ್ ಮಾಡಿದ್ದು ಸಖತ್ ವೈರಲ್ ಆಗಿದೆ. ಇದು ನಿಜವೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಇದು ನಿಜವಾದ ನೋಟಿಸ್ ಎಂದು ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ. ಆದರೆ ಅಸಲಿಗೆ ಇದೊಂದು ನಕಲಿ ನೋಟಿಸ್ ಪ್ರತಿಯೆಂದು ತಿಳಿದು ಬಂದಿದೆ. ಈ ನಕಲಿ ನೋಟಿಸ್ನಲ್ಲಿ ಹಾಸ್ಟೆಲ್ ಮುಖ್ಯ ವಾರ್ಡನ್ ಅಶುತೋಷ್ ಚಮೋಲಿ ನಕಲಿ ಸಹಿಯನ್ನು ಕಾಣಬಹುದಾಗಿದೆ.
ಚರಂಡಿಯಲ್ಲಿ ವೀರ್ಯ ನಿರ್ವಹಣೆ ಕಷ್ಟವಾಗ್ತಿದೆ ಎಂದರೆ ಇದಕ್ಕೆ ಏನಾದರೂ ಅರ್ಥವಿದೆಯೇ ಎಂದು ಎಕ್ಸ್ ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದರು. ಇನ್ನೂ ಕೆಲವರು ಹಸ್ತಮೈಥುನದಿಂದ ಯುವಕರಿಗೆ ಶಕ್ತಿ ಸಿಗುತ್ತೆ ಎಂದೂ ಸಹ ಬರೆದುಕೊಂಡಿದ್ದಾರೆ.
https://twitter.com/OhY4sh/status/1700560466576371897
https://twitter.com/cheemskarni/status/1700546767761330526

 
		 
		 
		 
		 Loading ...
 Loading ... 
		 
		 
		