HomeLatest NewsBREAKING : ಭಾರತ ಸೇರಿದಂತೆ ವಿಶ್ವದಾದ್ಯಂತ 'X' ಸರ್ವರ್ ಡೌನ್ ; ಬಳಕೆದಾರರ ಪರದಾಟ.!

BREAKING : ಭಾರತ ಸೇರಿದಂತೆ ವಿಶ್ವದಾದ್ಯಂತ ‘X’ ಸರ್ವರ್ ಡೌನ್ ; ಬಳಕೆದಾರರ ಪರದಾಟ.!

ನವದೆಹಲಿ/ವಾಷಿಂಗ್ಟನ್: ಜನಪ್ರಿಯ ಮೈಕ್ರೋಬ್ಲಾಗಿಂಗ್ ತಾಣವಾದ ‘X’ (ಹಿಂದಿನ ಟ್ವಿಟರ್) ದಿಢೀರ್ ತಾಂತ್ರಿಕ ದೋಷ ಎದುರಿಸಿದ್ದು, ಭಾರತ ಸೇರಿದಂತೆ ಜಗತ್ತಿನಾದ್ಯಂತ ಸಾವಿರಾರು ಬಳಕೆದಾರರು ತೊಂದರೆ ಅನುಭವಿಸಿದ್ದಾರೆ. ಈ ವ್ಯತ್ಯಯದಿಂದಾಗಿ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಎರಡೂ ಕೆಲಸ ಮಾಡುವುದನ್ನು ನಿಲ್ಲಿಸಿದ್ದವು.

ಬಳಕೆದಾರರಿಗೆ ತಮ್ಮ ಫೀಡ್‌ಗಳನ್ನು ರಿಫ್ರೆಶ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮೊಬೈಲ್ ಅಪ್ಲಿಕೇಶನ್‌ನಲ್ಲಿ “ಪೋಸ್ಟ್‌ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ” (Cannot retrieve posts) ಎಂಬ ಸಂದೇಶ ಕಾಣಿಸಿಕೊಂಡರೆ, ವೆಬ್‌ಸೈಟ್‌ನಲ್ಲಿ “ಏನೋ ತಪ್ಪಾಗಿದೆ, ಮತ್ತೆ ಪ್ರಯತ್ನಿಸಿ” (Something went wrong) ಎಂಬ ದೋಷದ ಸಂದೇಶ ಮೂಡಿಬಂದಿತ್ತು.

ಭಾರತದಲ್ಲೂ ಪರಿಣಾಮ: ಭಾರತದಲ್ಲಿ ಸುಮಾರು 4,500ಕ್ಕೂ ಹೆಚ್ಚು ಬಳಕೆದಾರರು ಈ ಸಮಸ್ಯೆಯ ಬಗ್ಗೆ ದೂರು ನೀಡಿದ್ದಾರೆ. ಬೆಂಗಳೂರು, ದೆಹಲಿ, ಮುಂಬೈ ಮತ್ತು ಹೈದರಾಬಾದ್‌ನಂತಹ ನಗರಗಳಲ್ಲಿ ಹೆಚ್ಚಿನ ವ್ಯತ್ಯಯ ಕಂಡುಬಂದಿತ್ತು. ಸದ್ಯಕ್ಕೆ ಈ ತಾಂತ್ರಿಕ ದೋಷಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕಂಪನಿಯ ಮಾಲೀಕ ಎಲೋನ್ ಮಸ್ಕ್ ಅಥವಾ ‘X’ ಸಂಸ್ಥೆಯು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸರ್ವರ್ ದೋಷ ಅಥವಾ ಬ್ಯಾಕೆಂಡ್ ಗ್ಲಿಚ್ ಇದಕ್ಕೆ ಕಾರಣವಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular