ನಾಳೆ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 454 ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇಮಕಾತಿಗೆ ಡಿ.10ರ ನಾಳೆ ಲಿಖಿತ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಕರೆಪತ್ರವನ್ನು ಡೌನ್ಲೋಡ್ ಮಾಡಿಕೊಂಡು ನಿಗದಿಪಡಿಸಿದ ದಿನಾಂಕದಂದು ಲಿಖಿತ ಪರೀಕ್ಷೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶದ ಪೊಲೀಸ್ ಕಾನ್ಸ್ಟೇಬಲ್(ಸಿವಿಲ್)(ಪುರುಷ ಮತ್ತು ಮಹಿಳಾ)(ತೃತೀಯ ಲಿಂಗಿ ಪುರುಷ ಮತ್ತು ಮಹಿಳಾ) ಹಾಗೂ ಸೇವಾನಿರತ ಮತ್ತು ಬ್ಯಾಕ್ಲಾಗ್-454 ಹುದ್ದೆಗಳಿಗೆ ಡಿಸೆಂಬರ್ 10 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಲಿಖಿತ ಪರೀಕ್ಷೆ ನಡೆಯಲಿದೆ.

ಪ್ರವೇಶ ಪತ್ರ ಡೌನ್‌ಲೋಡ್‌ ಮಾಡುವುದು ಹೇಗೆ?

ಪೊಲೀಸ್‌ ಇಲಾಖೆಯ 454 ಸಿಪಿಸಿ ನೇಮಕ ಪ್ರಕ್ರಿಯೆ ವೆಬ್‌ ವಿಳಾಸ https://cpc454.ksp-recruitment.in/ ಕ್ಕೆ ಭೇಟಿ ನೀಡಿ.

My Application  ಕ್ಲಿಕ್ ಮಾಡಿ.

ಬಳಿಕ ತೆರೆದ ವೆಬ್‌ಪೇಜ್‌ನಲ್ಲಿ ಅಪ್ಲಿಕೇಶನ್‌ ನಂಬರ್, ಜನ್ಮ ದಿನಾಂಕ ಮಾಹಿತಿ ನೀಡಿ ಲಾಗಿನ್ ಆಗಿರಿ.

ಪ್ರವೇಶ ಪತ್ರ ಪ್ರದರ್ಶಿತವಾಗುತ್ತದೆ. ಡೌನ್‌ಲೋಡ್ ಮಾಡಿ ಪ್ರಿಂಟ್‌ ತೆಗೆದುಕೊಳ್ಳಿ.

ಎಲ್ಲೆಲ್ಲಿ ನಡೆಯಲಿದೆ ಪರೀಕ್ಷೆ?

  • ಯಾದಗಿರಿ ಜಿಲ್ಲೆ
  • ರಾಯಚೂರು ಜಿಲ್ಲೆ
  • ಕೊಪ್ಪಳ ಜಿಲ್ಲೆ
  • ಬಳ್ಳಾರಿ ಜಿಲ್ಲೆ
  • ವಿಜಯನಗರ ಜಿಲ್ಲೆಗಳ ಪರೀಕ್ಷಾ ಕೇಂದ್ರ
  • ಬೆಂಗಳೂರು ನಗರ
  • ಚಿತ್ರದುರ್ಗ
  • ದಾವಣಗೆರೆ
  • ಹಾವೇರಿ
  • ಬೀದರ್
  • ಕಲಬುರಗಿ ನಗರ
  • ಕಲಬುರಗಿ ಜಿಲ್ಲೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read