ವಿವಾದಕ್ಕೆ ಸಿಲುಕಿರುವ ‘ಭಾರತ ಕುಸ್ತಿ ಒಕ್ಕೂಟ’ ಕ್ಕೆ ಮತ್ತೊಂದು ಶಾಕ್; ಸದಸ್ಯತ್ವದಿಂದ ಅಮಾನತುಗೊಳಿಸಿದ ವಿಶ್ವ ಕುಸ್ತಿ ಒಕ್ಕೂಟ…!

ಲೈಂಗಿಕ ಕಿರುಕುಳ ಆರೋಪದ ಕಾರಣಕ್ಕೆ ಭಾರತ ಕುಸ್ತಿ ಒಕ್ಕೂಟ ವಿವಾದಕ್ಕೆ ಸಿಲುಕಿದ್ದರ ಮಧ್ಯೆ ಈಗ ಮತ್ತೊಂದು ಶಾಕ್ ಎದುರಾಗಿದೆ. ನಿಗದಿತ ಸಮಯಕ್ಕೆ ಚುನಾವಣೆ ನಡೆಸಿಲ್ಲವೆಂಬ ಕಾರಣಕ್ಕೆ ವಿಶ್ವ ಕುಸ್ತಿ ಒಕ್ಕೂಟ, ಗುರುವಾರದಂದು ಭಾರತ ಕುಸ್ತಿ ಒಕ್ಕೂಟದ ಸದಸ್ಯತ್ವವನ್ನು ಅಮಾನತುಗೊಳಿಸಿದೆ.

ವಿಶ್ವ ಕುಸ್ತಿ ಒಕ್ಕೂಟದ ಸದಸ್ಯತ್ವ ಕಳೆದುಕೊಂಡಿರುವ ಕಾರಣಕ್ಕೆ ಭಾರತೀಯ ಕುಸ್ತಿಪಟುಗಳು ಮುಂಬರುವ ವಿಶ್ವ ಚಾಂಪಿಯನ್ಶಿಪ್ ನಲ್ಲಿ ದೇಶದ ಧ್ವಜದಡಿ ಸ್ಪರ್ಧಿಸಲು ಅವಕಾಶ ತಪ್ಪಿದಂತಾಗಿದ್ದು, ಭಾರತೀಯ ಕುಸ್ತಿಪಟುಗಳು ಸ್ಪರ್ಧಿಸಿದರೂ ಸಹ ಅವರ ಪ್ರದರ್ಶನವನ್ನು ಭಾರತದ ಪ್ರದರ್ಶನವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿದೆ.

ಸೆಪ್ಟೆಂಬರ್ 16ರಂದು ಸರ್ಬಿಯಾದಲ್ಲಿ ವಿಶ್ವ ಚಾಂಪಿಯನ್ಶಿಪ್ ಆರಂಭವಾಗಲಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸುವ ಭಾರತದ ಕುಸ್ತಿಪಟುಗಳನ್ನು ತಟಸ್ಥ ಕ್ರೀಡಾಪಟುಗಳಾಗಿ ಪರಿಗಣಿಸಲಾಗುತ್ತದೆ ಎಂದು ವಿಶ್ವ ಕುಸ್ತಿ ಒಕ್ಕೂಟ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read