ಇದು ವಿಶ್ವದ ಅತಿ ಚಿಕ್ಕ ಮನೆ: 19.4 ಚದರಡಿಯಲ್ಲಿ ಎಲ್ಲವೂ ಇದೆ | Watch Video

ಪ್ರಪಂಚದ ಅತಿ ದೊಡ್ಡ ಮನೆಗಳು, ಅರಮನೆಗಳ ಬಗ್ಗೆ ನೀವು ಕೇಳಿರಬಹುದು. ಆದರೆ, ವಿಶ್ವದ ಅತಿ ಚಿಕ್ಕ ಮನೆಯನ್ನು ನೋಡಿದ್ದೀರಾ ? ನಾವು ಯಾವುದೇ ಮಾದರಿ ಮನೆಯ ಬಗ್ಗೆ ಮಾತನಾಡುತ್ತಿಲ್ಲ. ಮಲಗುವ ಕೋಣೆ, ಅಡುಗೆ ಮನೆ ಮತ್ತು ಟಾಯ್ಲೆಟ್ ಹೊಂದಿರುವ 20 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ನಿಜವಾದ ಮನೆಯ ಬಗ್ಗೆ ಮಾತನಾಡುತ್ತಿದ್ದೇವೆ.

ಮೊದಲ ನೋಟಕ್ಕೆ, ಒಬ್ಬ ವ್ಯಕ್ತಿ ಮಾತ್ರ ಪ್ರವೇಶಿಸಲು ಸಾಧ್ಯವೆಂದು ಇದು ತೋರುತ್ತದೆ, ಆದರೆ ಅದು ನಿಜವಲ್ಲ. ಈ ಮನೆಯ ವಿಡಿಯೋವನ್ನು ಹಂಚಿಕೊಂಡಿರುವ ಯೂಟ್ಯೂಬರ್ ಲೆವಿ ಕೆಲ್ಲಿ ಈ ಬಗ್ಗೆ ಹೇಳಿದ್ದಾರೆ. ಇದು ಕೇವಲ 19.46 ಚದರ ಅಡಿ ಅಂದರೆ 1.8 ಚದರ ಮೀಟರ್ ವಿಸ್ತೀರ್ಣ ಹೊಂದಿದೆ.

ವಿಶ್ವದ ಅತಿ ಚಿಕ್ಕ ಮನೆಯಾಗಿದ್ದರೂ, ಈ ಮನೆ ಆಧುನಿಕ ಫ್ಲಾಟ್‌ನ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಲೆವಿ ಕೆಲ್ಲಿಗೆ ಸೇರಿದ ಈ ಮನೆ ದೂರದಿಂದ ನೋಡಲು ಟೆಲಿಫೋನ್ ಬೂತ್‌ನಂತೆ ಕಾಣುತ್ತದೆ. ಲೆವಿ ಈ ಮನೆಯನ್ನು ನಿರ್ಮಿಸಲು ಪ್ರೇರಣೆ ಪಡೆದಿದ್ದು, ವಿಶ್ವದ ಅತಿ ಚಿಕ್ಕ ಮನೆ ಎಂದು ಹೇಳಲಾದ ಮನೆಯಿಂದ. ಆದರೆ ಅದನ್ನು ನೋಡಿದ ನಂತರ, ಲೆವಿ ತಾನು ಇನ್ನೂ ಚಿಕ್ಕ ಮನೆಯನ್ನು ನಿರ್ಮಿಸಬಲ್ಲೆ ಎಂದು ಭಾವಿಸಿ ಕೇವಲ ಒಂದು ತಿಂಗಳಲ್ಲಿ ಅದನ್ನು ಮಾಡಿದರು. ಟ್ರೈಲರ್‌ನಲ್ಲಿ ಇರಿಸಲಾದ ಈ ಮನೆ ಕೇವಲ ಒಂದು ಆಕ್ಸಲ್‌ನೊಂದಿಗೆ ಚಕ್ರಗಳ ಮೇಲಿದೆ. ಇದು ಕುಳಿತುಕೊಳ್ಳುವ ಸ್ಥಳ, ಹಾಸಿಗೆ, ಅಡುಗೆಮನೆ ಮತ್ತು ಟಾಯ್ಲೆಟ್ ಅನ್ನು ಸಹ ಹೊಂದಿದೆ.

ಲೆವಿ ಈ ಮನೆಯನ್ನು ನಿರ್ಮಿಸಲು ಕೇವಲ 21,500 ರೂ.ಗಳನ್ನು ಖರ್ಚು ಮಾಡಿದ್ದು, ಓದಲು ಸ್ಥಳ, ಕೂಲಿಂಗ್ ಘಟಕದೊಂದಿಗೆ ನೀರಿನ ಟ್ಯಾಂಕ್, ವಾಟರ್ ಹೀಟರ್, ಫಿಲ್ಟರ್ ಮತ್ತು ಪಂಪ್ ವ್ಯವಸ್ಥೆಯನ್ನು ಹೊಂದಿದೆ. ಇದರ ಹೊರತಾಗಿ, ಮಿನಿ-ಫ್ರಿಡ್ಜ್ ಮತ್ತು ಎಲೆಕ್ಟ್ರಿಕ್ ಕುಕ್‌ಟಾಪ್ ಕೂಡ ಇವೆ. ವಯಸ್ಕರು ಇದರಲ್ಲಿ ಆರಾಮವಾಗಿ ನಿಲ್ಲಬಹುದು, ಆರಾಮವಾಗಿ ಮಲಗಬಹುದು ಎಂದು ಲೆವಿ ಹೇಳುತ್ತಾರೆ.

ಈ ಮನೆಯಲ್ಲಿ ಕ್ಯಾಂಪಿಂಗ್ ಶೈಲಿಯ ಟಾಯ್ಲೆಟ್ ಇದೆ. ಅಲ್ಲದೆ, ಶವರ್ ಅನ್ನು ಮನೆಯ ಹೊರಗೆ ಅಳವಡಿಸಲಾಗಿದೆ. ಸ್ಥಳದ ಕೊರತೆಯಿಂದ ಹೀಗೆ ಮಾಡಲಾಗಿದೆ ಎಂದು ಲೆವಿ ಹೇಳುತ್ತಾರೆ. ಅಗತ್ಯವಿದ್ದರೆ, ಶವರ್ ಅನ್ನು ಒಳಗೆ ಅಳವಡಿಸಿ ಬಳಸಬಹುದು ಎಂದು ಅವರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read