HomeLatest Newsತಿರುಪತಿಯಿಂದ ಬರುವಾಗಲೇ ಹೃದಯಾಘಾತ: ರೈಲಿನಲ್ಲೇ ಕೊನೆಯುಸಿರೆಳೆದ ಕಾರ್ಮಿಕ

ತಿರುಪತಿಯಿಂದ ಬರುವಾಗಲೇ ಹೃದಯಾಘಾತ: ರೈಲಿನಲ್ಲೇ ಕೊನೆಯುಸಿರೆಳೆದ ಕಾರ್ಮಿಕ

ಬಾಗಲಕೋಟೆ: ತಿರುಪತಿಯಿಂದ ರೈಲಿನಲ್ಲಿ ಆಗಮಿಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಲಾದಗಿಯ ಕಟ್ಟಡ ಕಾರ್ಮಿಕ ಯಲ್ಲಪ್ಪ ಅಡಗಲ್ಲ(35) ಮೃತಪಟ್ಟವರು.

ತಿರುಪತಿಗೆ ಹೋಗಿದ್ದ ಯಲ್ಲಪ್ಪ ಇಂದು ಬೆಳಗ್ಗೆ ತಿರುಪತಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆಂಧ್ರ ಪ್ರದೇಶದ ನಂದನೂರು ರೈಲ್ವೆ ನಿಲ್ದಾಣದಲ್ಲಿ ಹೃದಯಾಘಾತದಿಂದ ಮೃತಪಟ್ಟ ಯಲ್ಲಪ್ಪ ಅವರ ಮೃತದೇಹ ಇಳಿಸಿಕೊಂಡ ರೈಲ್ವೆ ಪೊಲೀಸರು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಂದ ಕಲಾದಗಿಗೆ ಮೃತದೇಹ ತರಲು ವ್ಯವಸ್ಥೆ ಮಾಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular