ಮಹಿಳಾ ಟಿ ಟ್ವೆಂಟಿ ಸರಣಿ; ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟಿ ಟ್ವೆಂಟಿ ಪಂದ್ಯ

ಈಗಾಗಲೇ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿಯಲ್ಲಿ ಮಹಿಳಾ ಭಾರತ ತಂಡ ಮೂರು ಪಂದ್ಯಗಳಲ್ಲೂ ಜಯಭೇರಿಯಾಗುವ ಮೂಲಕ ಕ್ಲೀನ್ ಸ್ವೀಪ್ ಮಾಡಿದ್ದು, ಇತ್ತೀಚಿಗಷ್ಟೇ  ಟೆಸ್ಟ್ ಪಂದ್ಯದಲ್ಲಿ ಕೂಡ ಜಯ ಸಾಧಿಸಿದೆ. ಈ ಮೂಲಕ ಭಾರತ ತಂಡ ತನ್ನ ತವರಿನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಸೋಲಿನ ರುಚಿ ತೋರಿಸಿದೆ.

ಇಂದಿನಿಂದ ಜುಲೈ ಒಂಭತ್ತರವರೆಗೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೂರು ಟಿ ಟ್ವೆಂಟಿ ಪಂದ್ಯಗಳು ನಡೆಯಲಿದ್ದು, ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ಮೊದಲ ಟಿ ಟ್ವೆಂಟಿ ಪಂದ್ಯ ನಡೆಯುತ್ತಿದೆ. ಭಾರತದ ಪಿಚ್ ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತರವೇ ಸಿಗದಂತಾಗಿದ್ದು, ಇಂದು ಯಾವ ರೀತಿ ಪ್ರದರ್ಶನ ತೋರಲಿದೆ ಕಾದು ನೋಡಬೇಕಾಗಿದೆ. ಮೂರು ಟಿ ಟ್ವೆಂಟಿ ಪಂದ್ಯಗಳು ಸಹ ಚೆನ್ನೈನಲ್ಲಿ ನಡೆಯಲಿದ್ದು, ಅಪಾರ ಸಂಖ್ಯೆಯ ಪ್ರೇಕ್ಷಕರು ಸೇರುವ ಸಾಧ್ಯತೆ ಹೆಚ್ಚಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read